Karnataka Budget Session: ಸದನದಲ್ಲಿ ಮತ್ತೊಮ್ಮೆ ಭಾಷಾ ಶಿಸ್ತಿನ ಚೌಕಟ್ಟು ಮೀರಿದ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಲ್ಲ, ಸದನ ನಡೆಸಲು ಸಾರ್ವಜನಿಕ ಹಣ ಬಕೆಯಾಗುತ್ತದೆ, ಅವರ ತೆರಿಗೆ ಹಣವನ್ನು ಪರಸ್ಪರ ಬೈದಾಡುತ್ತಾ ಕಚ್ಚಾಡುತ್ತ ವ್ಯಯ ಮಾಡೋದ್ರಲ್ಲಿ ಅರ್ಥವಿಲ್ಲ, ದಯವಿಟ್ಟು ಶಾಸಕರು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡೋದು ಬೇಡ ಅಂತ ಹಂಗಾಮಿ ಸಭಾಧ್ಯಕ್ಷ ಹೇಳಿದರೂ ನರೇಂದ್ರ ಸ್ವಾಮಿ ಮತ್ತು ಬೈರತಿ ಬಸವರಾಜ ನಡುವೆ ವಾಕ್ಸಮರ ಮುಂದುವರಿಯಿತು.
ಬೆಂಗಳೂರು, ಮಾರ್ಚ್ 17: ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಸದನದಲ್ಲಿ ಮಾತಾಡಲು ಎದ್ದು ನಿಂತಾಗೆಲ್ಲ ನಾಲಗೆ ಹರಿಬಿಡುವುದು ಮುಂದುವರಿದಿದೆ. ಇವತ್ತು ಸದನದಲ್ಲಿ ಅವರ ಮತ್ತು ಬಿಜೆಪಿ ಶಾಸಕ ಬೈರತಿ ಬಸವರಾಜ (Byrathi Basavaraj) ನಡುವೆ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ಇವರಿಬ್ಬರಲ್ಲದೆ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತಿದ್ದ ಕೆಎಂ ಶಿವಲಿಂಗೇಗೌಡ ಮತ್ತು ಬೇರೆ ಕೆಲ ಸದಸ್ಯರು ಒಟ್ಟಿಗೆ ಮಾತಾಡುತ್ತಿದ್ದ ಕಾರಣ ಯಾರು ಏನು ಹೇಳುತ್ತಿದ್ದಾರೆ ಅಂತ ಕೇಳಿಸುವುದಿಲ್ಲ. ಆದರೆ ನರೇಂದ್ರ ಸ್ವಾಮಿ ಏಕವಚನದದಲ್ಲಿ ಮತ್ತು ಏರಿದ ಧ್ವನಿಯಲ್ಲಿ ಏಯ್, ನಾನು ನೀನು ಅಂತ ಮಾತಾಡೋದು ಕೇಳಿಸುತ್ತದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ