Karnataka Budget Session: ಕೊಬ್ಬರಿಗೆ ಬೆಂಬಲ ಬೆಲೆ; ಕೆಎಂ ಶಿವಲಿಂಗೇಗೌಡ ಮತ್ತು ಬಿಜೆಪಿಯ ಸುರೇಶ್ ಗೌಡ ಮಧ್ಯೆ ಬಿರುಸಿನ ವಾಗ್ವಾದ

|

Updated on: Feb 13, 2024 | 2:03 PM

ಕೊನೆಗೆ ಶಿವಲಿಂಗೇಗೌಡರು, ಎಲ್ಲರಿಗೂ ಆರ್ಥವಾಗುವ ಹಾಗೆ, ಕೊಬ್ಬರಿ ಈಗ ಕ್ವಿಂಟಾಲ್ 10,000 ರೂ.ಯಂತೆ ಮಾರಾಟವಾಗುತ್ತಿದೆ ಮತ್ತು ಕೇಂದ್ರ ಸರ್ಕಾರ ಕ್ವಿಂಟಾಲ್ ಗೆ ರೂ. 2,000 ಸಹಾಯ ಧನ ನೀಡುತ್ತಿದೆ, ಆದರೆ ರಾಜ್ಯ ಸರ್ಕಾರ ಕೂಡ ಕೊಬ್ಬರಿ ಬೆಳೆಗಾರರಿಗೆ ಕ್ವಿಂಟಾಲ್ ಗೆ ರೂ. 1,500 ನೀಡುತ್ತಿರುವುದನ್ನು ಯಾರೂ ಮರೆಯಬಾರದು ಅನ್ನುತ್ತಾರೆ.

ಬೆಂಗಳೂರು: ಕೊಬ್ಬರಿಗೆ ಬೆಂಬಲ ನೀಡುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda), ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಮತ್ತು ಬಿಜೆಪಿ ಶಾಸಕ ಸುರೇಶ್ ಗೌಡ (Suresh Gowda) ನಡುವೆ ಬಿರುಸಿನ ವಾಗ್ವಾದಕ್ಕೆ ವಿಧಾನ ಸಭೆಯ ಬಜೆಟ್ ಅಧಿವೇಶನದ ಇಂದಿನ ಕಾರ್ಯಕಲಾಪ ಸಾಕ್ಷಿಯಾಯಿತು. ಶಿವಲಿಂಗೇಗೌಡರಿಗೆ ಕೋಪ ಬಂದಿದ್ದು ಚರ್ಚೆಯಲ್ಲಿ ಡಿಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದಾಗ. ಗೌಡರ ವಾದ ಸರಳವಾಗಿತ್ತು. ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡೋದು ನೇಫೆಡ್ ಮತ್ತು ಅದು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ ಅಂತ ಹೇಳಿದಾಗ ಸಿಟ್ಟಿಗೆದ್ದ ಸುರೇಶ್ ಗೌಡ, ಬೆಂಬಲ ಬೆಲೆಗಾಗಿ ರೈತರು ಕಂಗಾಲಾಗಿರುವಾಗ ನೀವು ಹೊಣೆಗಾರಿಕೆಯ ಮಾತಾಡುತ್ತಿದ್ದೀರಿ, ಕೇಂದ್ರ ಸರಕಾರ ರೈತರಿಗೆ ಕ್ವಿಂಟಾಲ್ ರೂ. 6,000 ದಂತೆ ಸಹಾಯ ಧನ ನೀಡುತ್ತಿದೆ ಎಂದಾಗ ಶಿವಲಿಂಗೇಗೌಡರು ಸಹ ರೊಚ್ಚಿಗೇಳುತ್ತಾರೆ. ಇಬ್ಬರ ನಡುವೆ ಏಕವಚನದಲ್ಲಿ ರಮಾತಿನ ಪ್ರಹಾರ ನಡೆಯುತ್ತದೆ. ಕೊನೆಗೆ ಶಿವಲಿಂಗೇಗೌಡರು, ಎಲ್ಲರಿಗೂ ಆರ್ಥವಾಗುವ ಹಾಗೆ, ಕೊಬ್ಬರಿ ಈಗ ಕ್ವಿಂಟಾಲ್ 10,000 ರೂ.ಯಂತೆ ಮಾರಾಟವಾಗುತ್ತಿದೆ ಮತ್ತು ಕೇಂದ್ರ ಸರ್ಕಾರ ಕ್ವಿಂಟಾಲ್ ಗೆ ರೂ. 2,000 ಸಹಾಯ ಧನ ನೀಡುತ್ತಿದೆ, ಆದರೆ ರಾಜ್ಯ ಸರ್ಕಾರ ಕೂಡ ಕೊಬ್ಬರಿ ಬೆಳೆಗಾರರಿಗೆ ಕ್ವಿಂಟಾಲ್ ಗೆ ರೂ. 1,500 ನೀಡುತ್ತಿರುವುದನ್ನು ಯಾರೂ ಮರೆಯಬಾರದು ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ