ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಶಾಸಕ ಶಿವಲಿಂಗೇಗೌಡ
ವಿಧಾನಸಭೆ ಕಲಾಪದಲ್ಲಿಂದು ಅರಸಿಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹಾಗೂ ಬಿಜೆಪಿ ಶಾಸಕರ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಈ ವೇಳೆ ದೇವೇಗೌಡ್ರಿಗೆ ಚೂರಿ ಹಾಕಿದ ಶಿವಲಿಂಗೇಗೌಡ ಅವರಿಗೆ ಧಿಕ್ಕಾರ, ಕಾಯಿ ಕಳ್ಳ, ಕೊಬ್ಬರಿ ಕಳ್ಳ ಎಂದು ಬಿಜೆಪಿ ಸದಸ್ಯರು ಕೂಗಾಡಿದ್ದು, ಇದು ವೈಯಕ್ತಿಕ ಆರೋಪ ಪ್ರತ್ಯಾರೋಪಕ್ಕೆ ತಿರುಗಿದೆ. ಚಿಂಚೋಳಿಯಲ್ಲಿ ನಿನ್ನ ಹೆಂಡತಿಯನ್ನು ತಹಶೀಲ್ದಾರ್ ಬಿಟ್ಟುಕೊಂಡು ಎಷ್ಟು ದುಡ್ಡು ಹೊಡೆದಿದ್ದೀಯಾ ಎಂದು ಗೊತ್ತಿದೆ. ನಿಮಗೆ ಮಾನ, ಮರ್ಯಾದೆ ಇದೆಯಾ ಎಂದು ಶಿವಲಿಂಗೇಗೌಡ್ರು, ಬಿಜೆಪಿ ಶಾಸಕ ಶರಣು ಸಲಗರ್ ಅವರಿಗೆ ವೈಯಕ್ತಿವಾಗಿ ಬೈದಾಡಿದ್ದಾರೆ. ಇದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಿವಲಿಂಗೇಗೌಡ್ರು ಕ್ಷಮೆ ಕೇಳಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಆದ್ರೆ, ಇದಕ್ಕೆ ಜಗ್ಗದ ಶಿವಲಿಂಗೇಗೌಡ, ನನಗೆ ವೈಯಕ್ತಿಕವಾಗಿ ಬೈದಿರುವುದಕ್ಕೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಇದಕ್ಕೆ ಇತರೆ ಕಾಂಗ್ರೆಸ್ ಸದಸ್ಯರು ಸಹ ಧ್ವನಿಗೂಡಿಸಿದರು. ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದೆ.
ಬೆಂಗಳೂರು, (ಫೆಬ್ರವರಿ 04): ವಿಧಾನಸಭೆ ಕಲಾಪದಲ್ಲಿಂದು (Karnataka Assembly Session) ಅರಸಿಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (Congress MLA shivalingegowda )ಹಾಗೂ ಬಿಜೆಪಿ ಶಾಸಕರ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಈ ವೇಳೆ ದೇವೇಗೌಡ್ರಿಗೆ ಚೂರಿ ಹಾಕಿದ ಶಿವಲಿಂಗೇಗೌಡ ಅವರಿಗೆ ಧಿಕ್ಕಾರ, ಕಾಯಿ ಕಳ್ಳ, ಕೊಬ್ಬರಿ ಕಳ್ಳ ಎಂದು ಬಿಜೆಪಿ ಸದಸ್ಯರು ಕೂಗಾಡಿದ್ದು, ಇದು ವೈಯಕ್ತಿಕ ಆರೋಪ ಪ್ರತ್ಯಾರೋಪಕ್ಕೆ ತಿರುಗಿದೆ. ಚಿಂಚೋಳಿಯಲ್ಲಿ ನಿನ್ನ ಹೆಂಡತಿಯನ್ನು ತಹಶೀಲ್ದಾರ್ ಬಿಟ್ಟುಕೊಂಡು ಎಷ್ಟು ದುಡ್ಡು ಹೊಡೆದಿದ್ದೀಯಾ ಎಂದು ಗೊತ್ತಿದೆ. ನಿಮಗೆ ಮಾನ, ಮರ್ಯಾದೆ ಇದೆಯಾ ಎಂದು ಶಿವಲಿಂಗೇಗೌಡ್ರು, ಬಿಜೆಪಿ ಶಾಸಕ ಶರಣು ಸಲಗರ್ ಅವರಿಗೆ ವೈಯಕ್ತಿವಾಗಿ ಬೈದಿದ್ದಾರೆ. ಇದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಿವಲಿಂಗೇಗೌಡ್ರು ಕ್ಷಮೆ ಕೇಳಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಆದ್ರೆ, ಇದಕ್ಕೆ ಜಗ್ಗದ ಶಿವಲಿಂಗೇಗೌಡ, ನನಗೆ ವೈಯಕ್ತಿಕವಾಗಿ ಬೈದಿರುವುದಕ್ಕೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಇದಕ್ಕೆ ಇತರೆ ಕಾಂಗ್ರೆಸ್ ಸದಸ್ಯರು ಸಹ ಧ್ವನಿಗೂಡಿಸಿದರು. ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ಜೋರಾಯ್ತು.
ಇನ್ನು ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದ ಶಿವಲಿಂಗೇಗೌಡ, ನನಗೆ ಕಾಯಿ ಕಳ್ಳ, ಕೊಬ್ಬರಿ ಕಳ್ಳ ಎಂದು ಹೇಳಿದ್ದಾರೆ. ನಾನು ಕಳ್ಳತನ ಮಾಡಿದ್ದು ತೋರಿಸಿ. ನಾನು ಕದ್ದಿದ್ದು ನೀವು ತೋರಿಸಿದ್ರೆ ನಿಮ್ಮ ಮನೆಯಲ್ಲಿ ಜೀತ ಮಾಡುತ್ತೇನೆ. ನಾನು ಮಾತನಾಡಿದ್ದಕ್ಕೆ ಈಗಲೂ ಬದ್ಧನಾಗಿದ್ದೇನೆ. ನನಗೆ ಕಳ್ಳ ಅಂದ್ರೆ ಅವರಿಗೆ ಮುತ್ತು ಕೊಡಬೇಕಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸುತ್ತಲ್ಲೇ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡರು.
ಇದನ್ನೂ ನೋಡಿ: ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗರ್- ಶಿವಲಿಂಗೇಗೌಡ
ತಮ್ಮ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ

