ತನ್ನದೇ ಪಕ್ಷದ ಸಂಸದೆ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ; ವಿಡಿಯೋ ವೈರಲ್

Updated on: Nov 04, 2026 | 3:07 PM

ನವೆಂಬರ್ 1ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳು ಹಮ್ಮಿಕೊಂಡಿದ್ದ 'ವೋಟ್ ಬಚಾವೋ ದೇಶ್ ಬಚಾವೋ' ರ‍್ಯಾಲಿಗೆ ತೆರಳಲು ಸಂಸದರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸಂಸದೆ ವರ್ಷಾ ಗಾಯಕ್ವಾಡ್ ಅವರೊಂದಿಗೆ ಪ್ರತಿಭಾ ಧನೋರ್ಕರ್ ಕುಳಿತು ನಗುತ್ತಾ ಮಾತನಾಡುತ್ತಿದ್ದಾಗ, ಪಕ್ಕದಲ್ಲೇ ನಿಂತಿದ್ದ ಸಂಸದ ಶ್ಯಾಮ್‌ಕುಮಾರ್ ಬರ್ವೆ ಪ್ರತಿಭಾ ಅವರ ಕೆನ್ನೆಗೆ ಮೆಲ್ಲನೆ ಹೊಡೆದಿದ್ದಾರೆ.

ಮುಂಬೈ, ನವೆಂಬರ್ 4: ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ರ‍್ಯಾಲಿಯ ವೇಳೆ ಬಸ್‌ನಲ್ಲಿ ಕುಳಿತಿದ್ದ ಚಂದ್ರಪುರದ ಮಹಿಳಾ ಸಂಸದೆ ಪ್ರತಿಭಾ ಧನೋರ್ಕರ್ ಅವರ ಕೆನ್ನೆಗೆ ಕಾಂಗ್ರೆಸ್ ಸಂಸದ ಶ್ಯಾಮ್‌ಕುಮಾರ್ ಬರ್ವೆ ಮೆಲ್ಲನೆ ಹೊಡೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಂಸದೆ ಪ್ರತಿಭಾ ಧನೋರ್ಕರ್, “ಅದು ಕೇವಲ ತಮಾಷೆಯಷ್ಟೇ. ಶ್ಯಾಮ್‌ಕುಮಾರ್ ಬರ್ವೆ ನನಗೆ ಅಣ್ಣನಿದ್ದಂತೆ” ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ನವೆಂಬರ್ 1ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳು ಹಮ್ಮಿಕೊಂಡಿದ್ದ ‘ವೋಟ್ ಬಚಾವೋ ದೇಶ್ ಬಚಾವೋ’ ರ‍್ಯಾಲಿಗೆ ತೆರಳಲು ಸಂಸದರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸಂಸದೆ ವರ್ಷಾ ಗಾಯಕ್ವಾಡ್ ಅವರೊಂದಿಗೆ ಪ್ರತಿಭಾ ಧನೋರ್ಕರ್ ಕುಳಿತು ನಗುತ್ತಾ ಮಾತನಾಡುತ್ತಿದ್ದಾಗ, ಪಕ್ಕದಲ್ಲೇ ನಿಂತಿದ್ದ ಸಂಸದ ಶ್ಯಾಮ್‌ಕುಮಾರ್ ಬರ್ವೆ ಪ್ರತಿಭಾ ಅವರ ಕೆನ್ನೆಗೆ ಮೆಲ್ಲನೆ ಹೊಡೆದಿದ್ದಾರೆ.

ಸಂಸದೆ ಪ್ರತಿಭಾ ಇದನ್ನು ತಮಾಷೆ ಎಂದು ತಳ್ಳಿಹಾಕಿದ್ದರೂ, ಈ ಘಟನೆಯ ವೀಡಿಯೊದ ಆಧಾರದ ಮೇಲೆ ಕಾಂಗ್ರೆಸ್‌ನ ಕೆಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಪಕ್ಷದ ಶಿಸ್ತು ಮತ್ತು ಮಹಿಳಾ ನಾಯಕರ ಗೌರವದ ಹಿತದೃಷ್ಟಿಯಿಂದ ಈ ಕುರಿತು ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Nov 04, 2026 03:07 PM
Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More