AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಬಿಸಿರಕ್ತದ ಅವಶ್ಯಕತೆಯಿದೆ, ಪಕ್ಷಕ್ಕೆ ಯುವಕರನ್ನು ಕರೆತನ್ನಿ ಎಂದು ಕಾಂಗ್ರೆಸ್ ಯುವ ಮೋರ್ಚಾಗೆ ಹೇಳಿದರು ಡಿಕೆ ಶಿವಕುಮಾರ

ಕಾಂಗ್ರೆಸ್ ಬಿಸಿರಕ್ತದ ಅವಶ್ಯಕತೆಯಿದೆ, ಪಕ್ಷಕ್ಕೆ ಯುವಕರನ್ನು ಕರೆತನ್ನಿ ಎಂದು ಕಾಂಗ್ರೆಸ್ ಯುವ ಮೋರ್ಚಾಗೆ ಹೇಳಿದರು ಡಿಕೆ ಶಿವಕುಮಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 10, 2022 | 5:00 PM

Share

ಯುವ ಕಾಂಗ್ರೆಸ್ ಗಾಗಿ ತಾವು ಯುವಧ್ವನಿ ಎಂಬ ಕಾರ್ಯಕ್ರಮ ರೂಪಿಸಿರುವುದಾಗಿ ಹೇಳಿದ ಡಿಕೆಶಿ, ಪ್ರಸಕ್ತ ರಾಜಕೀಯ ವಿದ್ಯಮಾನಗಳಲ್ಲಿ ಅದರ ರೂಪುರೇಷೆ ಹಂಚಿಕೊಳ್ಳುವುದು ಸರಿಯಲ್ಲ, ಮತ್ತೊಂದು ಸಂದರ್ಭದಲ್ಲಿ ಅದರ ಬಗ್ಗೆ ಹೇಳುವುದಾಗಿ ತಿಳಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಬೆಂಗಳೂರಿನಲ್ಲಿಂದು ರಾಜ್ಯ ಯುವ ಕಾಂಗ್ರೆಸ್ ಮೋರ್ಚಾದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮೊಹಮ್ಮದ್ ನಲಪಾಡ್ (Mohammad Nalpad) ಮೇಲೆ ಬಹಳ ವಿಶ್ವಾಸವಿಟ್ಟುಕೊಂಡಿರುವಂತಿದೆ. ಯುವ ಕಾಂಗ್ರೆಸ್ ರೋಡ್ ಮ್ಯಾಪ್, ಕಾರ್ಯಕ್ರಮಗಳ ಬಗ್ಗೆ ನಲಪಾಡ್ ವಿವರಿಸಿದ ಬಳಿಕ ಬಹಳ ಇಂಪ್ರೆಸ್ ಆದಂತೆ ಕಂಡ ಶಿವಕುಮಾರ, ಯೋಜನೆಗಳ ಬಗ್ಗೆ ಸಮ್ಮತಿ ಸೂಚಿಸಿ ಅವುಗಳನ್ನು ಕಾರ್ಯರೂಪಕ್ಕೆ ತರಲು ಹೇಳಿದರು. ಪಕ್ಷಕ್ಕೆ ಹೊಸ ಮತ್ತು ಬಿಸಿರಕ್ತದ ಅವಶ್ಯಕತೆ ಇದೆ ಅಂತ ಹೇಳಿದ ಶಿವಕುಮಾರ ಅವರು, ಪ್ರತಿ ವಿಧಾನ ಸಭಾ ಮತಕ್ಷೇತ್ರದಲ್ಲಿ ಕನಿಷ್ಟ 5,000 ಯುವಕನ್ನು ಪಕ್ಷದ ಕಾರ್ಯಕರ್ತರಾಗಿ ನೋಂದಾಯಿಸಿಕೊಳ್ಳುವಂತೆ ನಿರ್ದೇಶನ ನೀಡಿದರು. ಈ ಕೆಲಸ ಜೇಷ್ಠತೆಯ ಆಧಾರದ ಮೇಲೆ ತುರ್ತಾಗಿ ಅಗಬೇಕಿರುವ ಕೆಲಸವೆಂದು ಶಿವಕುಮಾರ ಒತ್ತಿ ಹೇಳಿದರು. ಮೊದಲ ಒಂದೂವರೆ ತಿಂಗಳವರೆಗೆ ಹೊಸ ಸದಸ್ಯರನ್ನು ಮಾಡುವ ಕೆಲಸದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಬೇಕೆಂದು ಅವರು ಆಗ್ರಹಿಸಿದರು.

ರಾಜ್ಯ ಯುವ ಕಾಂಗ್ರೆಸ್ ನಿರುದ್ಯೋಗದ ಸಮಸ್ಯೆಯ ಕಡೆ ಗಮನಹರಿಸಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಕೆಪಿಸಿಸಿ ಆಧ್ಯಕ್ಷ ಸದಸ್ಯತ್ವ ಮಾಡಿಕೊಳ್ಳುವ ಟಾಸ್ಕ್ ಮುಗಿದ ನಂತರ, ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ, ತಾಲ್ಲೂಕಿನಲ್ಲಿ ಮತ್ತು ಗ್ರಾಮೀಣ ಭಾಗಗಳಲ್ಲಿ ಕೆಲಸಕ್ಕಾಗಿ ಅಲೆಯುತ್ತಿರುವ ಸುಮಾರು 3,000-5,000 ಯುವಕರನ್ನ ಜೊತೆಗೂಡಿಸಿ ನಿರುದ್ಯೋಗ ಮಾರ್ಚ್ ಆಯೋಜಿಸುವಂತೆ ಕರೆ ನೀಡಿದರು.

ನಿರುದ್ಯೋಗ ಸಮಸ್ಯೆಯ ಪೆಡಂಭೂತವಾಗಿ ಯುವಕರನ್ನು ಕಾಡುತ್ತಿದೆ, ಬಿಜೆಪಿ ಸರ್ಕಾರದ ಮೇಲೆ ಭರವೆಸಯಿಟ್ಟು ಯುವಕರು ಭ್ರಮನಿರಸನಗೊಂಡಿದ್ದಾರೆ. ಅವರ ಸಮಸ್ಯೆಯನ್ನು ಯುವ ಕಾಂಗ್ರೆಸ್ ಕೈಗೆತ್ತಿಕೊಳ್ಳಬೇಕು ಎಂದು ಶಿವಕುಮಾರ ಹೇಳಿದರು.

ಯುವ ಕಾಂಗ್ರೆಸ್ ಗಾಗಿ ತಾವು ಯುವಧ್ವನಿ ಎಂಬ ಕಾರ್ಯಕ್ರಮ ರೂಪಿಸಿರುವುದಾಗಿ ಹೇಳಿದ ಡಿಕೆಶಿ, ಪ್ರಸಕ್ತ ರಾಜಕೀಯ ವಿದ್ಯಮಾನಗಳಲ್ಲಿ ಅದರ ರೂಪುರೇಷೆ ಹಂಚಿಕೊಳ್ಳುವುದು ಸರಿಯಲ್ಲ, ಮತ್ತೊಂದು ಸಂದರ್ಭದಲ್ಲಿ ಅದರ ಬಗ್ಗೆ ಹೇಳುವುದಾಗಿ ತಿಳಿಸಿದರು.

ಇದನ್ನೂ ಓದಿ:   ದೇವಸ್ಥಾನಕ್ಕೆ ಹೆಣ್ಣು ಮಕ್ಕಳು ಚಡ್ಡಿ ಮೇಲೆ ಹೋಗುತ್ತಾರೆ, ಅವರನ್ನು ತಡೆಯಿರಿ; ಕಲಬುರಗಿ ನಗರಸಭೆ ಸದಸ್ಯನ ಮಾತಿನ ವಿಡಿಯೋ ವೈರಲ್