AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ವರ್ಷ ಸಾವು ಬದುಕಿನೊಂದಿಗೆ ಹೋರಾಡಿದ ಕಿಚ್ಚ ಸುದೀಪ್ ಪುಟ್ಟ ಅಭಿಮಾನಿ ರಾಚೆಲ್ ಪ್ರಿಶಾ ಕೊನೆಗೂ ಬದುಕುಳಿಯಲಿಲ್ಲ!

ಎರಡು ವರ್ಷ ಸಾವು ಬದುಕಿನೊಂದಿಗೆ ಹೋರಾಡಿದ ಕಿಚ್ಚ ಸುದೀಪ್ ಪುಟ್ಟ ಅಭಿಮಾನಿ ರಾಚೆಲ್ ಪ್ರಿಶಾ ಕೊನೆಗೂ ಬದುಕುಳಿಯಲಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 10, 2022 | 6:02 PM

Share

ಪ್ರಿಶಾ ಆಸ್ಪತ್ರೆಯಲ್ಲಿದ್ದಾಗ ಪೋಷಕರು ಸುದೀಪ್ ಅವರಿಗೆ ಫೋನ್ ಮಾಡಿ ಅವಳಿಗೆ ಅವರ ಮೇಲಿದ್ದ ಅಭಿಮಾನದ ಬಗ್ಗೆ ತಿಳಿಸಿದ ಬಳಿಕ ನಟ ಆಗಾಗ ಫೋನ್ ಮಾಡಿ ಅವಳ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಸುದೀಪ್ ಅವರು ಆಸ್ಪತ್ರೆಯಲ್ಲಿರುವ ಪ್ರಿಶಾಳ ತಂದೆ-ತಾಯಿಗಳ ವಿಡಿಯೋ ಕಾಲ್ ಮೂಲಕ ಮಾತಾಡುತ್ತಿರುವ ಕ್ಲಿಪ್ಪಿಂಗ್ ಇಲ್ಲಿದೆ.

ಕನ್ನಡದ ಜನಪ್ರಿಯ ನಟ ಸುದೀಪ್ (Sudeep) ಅವರ ಕಟ್ಟಾ ಅಭಿಮಾನಿ ಮತ್ತು ಅವರ ಟಿವಿಯಲ್ಲಿ ಕಂಡಾಗಲೆಲ್ಲ ‘ಕಿಚ್ಚ ಮಾಮ’ ಅಂತ ಪ್ರೀತಿಯಿಂದ ಉದ್ಗರಿಸುತ್ತಿದ್ದ 10 ವರ್ಷದ ಬಾಲಕಿ ರಾಚೆಲ್ ಪ್ರಿಶಾ (Raechel Prisha) ಸುಮಾರು ಎರಡು ವರ್ಷಗಳ ಕಾಲ ಮಣಿಪಾಲ ಆಸ್ಪತ್ರೆಯಲ್ಲಿ (Manipal Hospital) ಸಾವು ಬದುಕಿನೊಂದಿಗೆ ಹೋರಾಡಿ ಪ್ರಾಣ ಬಿಟ್ಟಿದ್ದಾಳೆ. ಅವಳು ಬದುಕಿಯೇ ಬದುಕುತ್ತಾಳೆ ಅಂತ ನಿರೀಕ್ಷೆ ಇಟ್ಟುಕೊಂಡಿದ್ದ ಮತ್ತು ಎರಡು ವರ್ಷಗಳಿಂದ ಅವಳ ಆರೈಕೆಯಲ್ಲಿ ತೊಡಗಿದ್ದ ತಂದೆ ತಾಯಿಗಳ ಅಕ್ರಂದನ ನೋಡಲಾಗದು ಮಾರಾಯ್ರೇ. ಅವಳನ್ನು ಉಳಿಸಿಕೊಳ್ಳಲು ಅವರು ಏನೇನೆಲ್ಲ ಮಾಡಿಲ್ಲ; ಅದರೆ, ವಿಧಿಗೆ ತನ್ನಾಟವೇ ಮುಖ್ಯವಾಯಿತು. ಪೋಷಕರನ್ನು ಶೋಕ ಸಾಗರಕ್ಕೆ ತಳ್ಳಿ ಅದು ಮಗುವನ್ನು ತೆಗೆದುಕೊಂಡು ಹೋಗಿದೆ.

ಪ್ರಿಶಾ, ತಂದೆ ತಾಯಿಗಳೊಂದಿಗೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿರುವ ಕೌದೇನಹಳ್ಳಿಯಲ್ಲಿ ವಾಸವಾಗಿದ್ದಳು. ಮಾರ್ಚ್ 11, 2020 ರಂದು ತಂದೆಯ ಜೊತೆ ಬೈಕ್ ಹಿಂದೆ ಕೂತು ಶಾಲೆಗೆ ಹೋಗುವಾಗ ರಸ್ತೆ ಬದಿಯ ಮರದ ಕೊಂಬೆಯೊಂದು ಮುರಿದು ಅವಳ ತಲೆ ಮೇಲೆ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ (head injury) ಪ್ರಿಶಾಳನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಆದರೆ ಈ ನತದೃಷ್ಟ ಮಗು ಎರಡು ವರ್ಷ ಕಾಲ ನಗರದ ಖ್ಯಾತ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದರೂ ಬದುಕುಳಿಯಲಿಲ್ಲ.

ಪ್ರಿಶಾ ಆಸ್ಪತ್ರೆಯಲ್ಲಿದ್ದಾಗ ಪೋಷಕರು ಸುದೀಪ್ ಅವರಿಗೆ ಫೋನ್ ಮಾಡಿ ಅವಳಿಗೆ ಅವರ ಮೇಲಿದ್ದ ಅಭಿಮಾನದ ಬಗ್ಗೆ ತಿಳಿಸಿದ ಬಳಿಕ ನಟ ಆಗಾಗ ಫೋನ್ ಮಾಡಿ ಅವಳ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಸುದೀಪ್ ಅವರು ಆಸ್ಪತ್ರೆಯಲ್ಲಿರುವ ಪ್ರಿಶಾಳ ತಂದೆ-ತಾಯಿಗಳ ವಿಡಿಯೋ ಕಾಲ್ ಮೂಲಕ ಮಾತಾಡುತ್ತಿರುವ ಕ್ಲಿಪ್ಪಿಂಗ್ ಇಲ್ಲಿದೆ.

ಮಗುವಿಗೆ ತಮ್ಮ ಪರಿಚಯದ ವೈದ್ಯರೊಬ್ಬರಿಂದ ಚಿಕಿತ್ಸೆ ಕೊಡಿಸುವುದಾಗಿ ಸುದೀಪ್ ಹೇಳುವುದು ವಿಡಿಯೋನಲ್ಲಿ ಕೇಳಿಸುತ್ತದೆ.

ಪ್ರಿಶಾಳ ಸಾವಿಗೆ ಬಿಬಿಎಮ್​ಪಿಯ ನಿರ್ಲಕ್ಷ್ಯ ಕಾರಣ ಎಂದು ಪ್ರಿಶಾಳ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಮರದಲ್ಲಿ ಒಣಗಿ ಹೋಗಿದ್ದ ರೆಂಬೆಗಳನ್ನು ಪಾಲಿಕೆ ಸಿಬ್ಬಂದಿ ಕಡಿದು ಹಾಕಿದ್ದರೆ ಈ ಘೋರ ದುರಂತ ಸಂಭವಿಸುತ್ತಿರಲಿಲ್ಲ ಎಂದು ಅವರು ದೂರುತ್ತಾರೆ.

ಇದನ್ನೂ ಓದಿ:   ಮತ್ತೆ ಮಾನವೀಯ ಕಾರ್ಯಗಳ ಮೂಲಕ ಸುದ್ದಿಯಾದ ಸೋನು; ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಿದ ವಿಡಿಯೋ ವೈರಲ್