ಮುಂದಿನ ಚುನಾವಣೆಯೇ ಕೊನೆ; ನಿವೃತ್ತಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ- ವಿಡಿಯೋ ನೋಡಿ

TV9 Web
| Updated By: ganapathi bhat

Updated on: Mar 25, 2022 | 12:35 PM

ಹಲವು ಕ್ಷೇತ್ರಗಳ ಜನ ಸ್ಪರ್ಧೆಗೆ ಆಹ್ವಾನಿಸಿದ್ದಾರೆ. ಎಲ್ಲ ಕ್ಷೇತ್ರಗಳೂ ಪ್ರಯಾರಿಟಿ, ಹೆಚ್ಚು- ಕಮ್ಮಿ ಅಂತ ಇಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮೈಸೂರು: ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ವರುಣ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಬಾದಾಮಿ, ಕೋಲಾರ ಇಷ್ಟು ಕ್ಷೇತ್ರದ ಜನ ಕೇಳುತ್ತಿದ್ದಾರೆ. ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ತೀರ್ಮಾನ ಮಾಡಿಲ್ಲ. ಎಲ್ಲಿ ನನಗೆ ರಾಜಕೀಯ ಪುನರ್ ಜನ್ಮ ಸಿಕ್ಕಿತೋ ಅಲ್ಲಿಯೇ ಸೋಲಿಸಿದರು. ಹಾಗಂತ ಬೇಸರ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಬರೋಬ್ಬರಿ ಐದು ಬಾರಿ ಚಾಮುಂಡೇಶ್ವರಿ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅದಕ್ಕಾಗಿ ಚಾಮುಂಡೇಶ್ವರಿಯನ್ನು ನಾನು ಯಾವಾಗಲೂ ಮರೆಯಲ್ಲ. ಮುಂದಿನ ಚುನಾವಣೆಯೇ ಕೊನೆ. ಮತ್ತೆ ಚುನಾವಣಾ ರಾಜಕಾರಣ ಮಾಡಲ್ಲ. ಆದರೆ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ. ಹೀಗಾಗಿ ಹಲವು ಕ್ಷೇತ್ರಗಳ ಜನ ಸ್ಪರ್ಧೆಗೆ ಆಹ್ವಾನಿಸಿದ್ದಾರೆ. ಎಲ್ಲ ಕ್ಷೇತ್ರಗಳೂ ಪ್ರಯಾರಿಟಿ, ಹೆಚ್ಚು- ಕಮ್ಮಿ ಅಂತ ಇಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ, ಸ್ಪೀಕರ್ ನಮ್ಮ ಆರ್‌ಎಸ್ಎಸ್ ಎಂದು ಹೇಳಿದ್ದು ತಪ್ಪು. ಸ್ಪೀಕರ್ ಸ್ಥಾನದಲ್ಲಿ ಕುಳಿತು ಆ ಮಾತು ಹೇಳಿದ್ದು ತಪ್ಪು. ಸ್ಪೀಕರ್ ಆದವರು ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಆದರೆ ಸ್ಪೀಕರ್ ನಮ್ಮ RSS ಎಂದು ಹೇಳಿರುವುದು ಸರಿಯಲ್ಲ. ಸಮಾಜ ಒಡೆಯುವುದೇ ಆರ್‌ಎಸ್‌ಎಸ್‌ನವರ ಅಜೆಂಡಾ. ಹೀಗಾಗಿಯೇ ನಾವು ಆರ್‌ಎಸ್‌ಎಸ್ ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರೇಣುಕಾಚಾರ್ಯ ಪುತ್ರಿ ಜಾತಿ ಪ್ರಮಾಣ ಪತ್ರ ವಿವಾದಕ್ಕೆ ಸಂಬಂಧಿಸಿ ರೇಣುಕಾಚಾರ್ಯ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು. ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಿ. ಶಾಸಕ ರೇಣುಕಾಚಾರ್ಯರನ್ನು ಸಮರ್ಥಿಸಿಕೊಳ್ಳಬಾರದು. ಅವರನ್ನು ಸಮರ್ಥಿಸಿಕೊಳ್ಳುವುದು ಪ್ರೋತ್ಸಾಹ ಕೊಟ್ಟಂತೆ. ಕಾನೂನುಬಾಹಿರ ಕೆಲಸಕ್ಕೆ ಪ್ರೋತ್ಸಾಹ ಕೊಟ್ಟಂತಾಗುತ್ತೆ. ರಾಜ್ಯ ಸರ್ಕಾರವೇ ಈಗ ಅವರನ್ನು ಸಮರ್ಥಿಸಿಕೊಳ್ಳುತ್ತಿದೆ. ಅವರನ್ನು ಏನು ಮಾಡಬೇಕು ಹೇಳಿ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಕಡಿಮೆ ಪರಿಹಾರ, ಹತ್ಯೆಗೀಡಾದ ಹಿಂದೂಗಳ ಕುಟುಂಬಕ್ಕೆ ಹೆಚ್ಚು ಪರಿಹಾರ: ಸಿದ್ದರಾಮಯ್ಯ ಕಿಡಿ

ಇದನ್ನೂ ಓದಿ: ಊರ ಜಾತ್ರೆಯಲ್ಲಿ ಸಿದ್ದರಾಮಯ್ಯ ಸಖತ್ ಸ್ಟೆಪ್: ಅಪ್ಪನ ಡಾನ್ಸ್ ನೋಡಿ ಮಗನಿಗೆ ಖುಷಿ