Assembly Polls |  ಆಮಿಶಗಳಿಗೆ ಒಳಗಾಗುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡುವುದಿಲ್ಲ: ಜಿ ಪರಮೇಶ್ವರ್

Assembly Polls |  ಆಮಿಶಗಳಿಗೆ ಒಳಗಾಗುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡುವುದಿಲ್ಲ: ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 21, 2023 | 6:47 PM

ಬಿಜೆಪಿ ಪ್ರದರ್ಶಿಸಿದ ಕೀಳುಮಟ್ಟದ ರಾಜಕಾರಣದಿಂದ ನಾವು ಪಾಠ ಕಲಿತಿದ್ದೇವೆ, ಆಪರೇಶನ್ ಕಮಲದಂಥ ಆಮಿಶಗಳಿಗೆ ಒಳಗಾಗುವ ಅಭ್ಯರ್ಥಿಗಳಿಗೆ ಸರ್ವಥಾ ಟಿಕೆಟ್ ನೀಡುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.

ಮಂಗಳೂರು: ಬಹಳ ದಿನಗಳ ನಂತರ ಹಿರಿಯ ಕಾಂಗ್ರೆಸ್ ನಾಯಕ ಜಿ ಪರಮೇಶ್ವರ್ (G Parmeshwar) ಅವರು ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ್ದಾರೆ. ಮಂಗಳೂರಲ್ಲಿ ಶನಿವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತಾಡಿದ ಅವರು, ಈ ಬಾರಿಯ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಹೆಚ್ಚಿನ ಜಾಗರೂಕತೆ ವಹಿಸಲಾಗುವುದೆಂದು ಹೇಳಿದರು. ಕಳೆದ ಬಾರಿ ಬಿಜೆಪಿ (BJP) ಪ್ರದರ್ಶಿಸಿದ ಕೀಳುಮಟ್ಟದ ರಾಜಕಾರಣದಿಂದ ನಾವು ಪಾಠ ಕಲಿತಿದ್ದೇವೆ, ಸಂಕಲ್ಪಬದ್ಧರಲ್ಲದ ಮತ್ತು ಆಪರೇಶನ್ ಕಮಲದಂಥ (Operation Lotus) ಆಮಿಶಗಳಿಗೆ ಒಳಗಾಗುವ ಅಭ್ಯರ್ಥಿಗಳಿಗೆ ಸರ್ವಥಾ ಟಿಕೆಟ್ ನೀಡುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.