ಹುಬ್ಬಳ್ಳಿ: ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಬಗೆಬಗೆಯ ಗಾಳಿಪಟಗಳು

TV9kannada Web Team

TV9kannada Web Team | Edited By: Rakesh Nayak Manchi

Updated on: Jan 21, 2023 | 8:21 PM

ಹುಬ್ಬಳ್ಳಿಯ ನೃಪತುಂಗ‌ ಬೆಟ್ಟದ ಹಿಂಭಾಗದ ಮೈದಾನದಲ್ಲಿ ಗಾಳಿಪಟ ಉತ್ಸವ ನಡೆದಿದ್ದು, 15 ರಾಷ್ಟ್ರಗಳ ಸ್ಪರ್ಧಿಗಳು ಕೂಡ ಭಾಗವಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ (International Kite Festival) ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಚಾಲನೆ ನೀಡಿದ್ದಾರೆ. ಹುಬ್ಬಳ್ಳಿಯ ನೃಪತುಂಗ‌ ಬೆಟ್ಟದ ಹಿಂಭಾಗದ ಮೈದಾನದಲ್ಲಿ ಇಂದಿನಿಂದ ಆರಂಭಗೊಂಡಿರುವ ಗಾಳಿಪಟ ಉತ್ಸವ ನಾಳೆ ಕೊನೆಗೊಳ್ಳಲಿದೆ. ಮೊದಲ ದಿನದ ಉತ್ಸವದಲ್ಲಿ ಕಾಂತಾರ ಸಿನಿಮಾದ ಪಂಜುರ್ಲಿ ಶೈಲಿಯ ಗಾಳಿಪಟ ಸೇರಿದಂತೆ ದೇಶ ವಿದೇಶಗಳ ಜನರು ತಯಾರಿಸಿದ ಭಿನ್ನ ವಿಭಿನ್ನ ಗಾಳಿಪಟಗಳು ಹಾರಾಡಿದವು. ಉತ್ಸವದಲ್ಲಿ 15 ರಾಷ್ಟ್ರಗಳ ವಿದೇಶಿ ಸ್ಪರ್ಧಿಗಳು ಕೂಡ ಭಾಗಿಯಾಗಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada