ಗ್ಯಾಸ್ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ಫ್ರೀಡಂ ಪಾರ್ಕ್ ಬಂದ ಶಿವಕುಮಾರ್​​ಗೆ ಭರ್ಜರಿ ಸ್ವಾಗತ

Updated on: Apr 17, 2025 | 2:02 PM

ಶಿವಕುಮಾರ್ ವೇದಿಕೆ ಮೇಲೆ ಕಂಡಾಗ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನ ಶಿಳ್ಳೆ, ಚಪ್ಪಾಳೆ ಮೂಲಕ ಸ್ವಾಗತಿಸುತ್ತಾರೆ . ಶಿವಕುಮಾರ್ ಆಸನವೊಂದರಲ್ಲಿ ಕೂರುವ ಮೊದಲು ವೇದಿಕೆಯ ಮೇಲಿಟ್ಟಿದ್ದ ಸಿಲಿಂಡರ್​ಗಳಿಗೆ ಹಣೆಹಚ್ಚಿ ನಮಸ್ಕಾರ ಮಾಡಿ ಮುಗುಳ್ನಗುತ್ತಾರೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ತಮ್ಮ ಭಾಷಣವನ್ನು ಮುಂದುವರಿಸುತ್ತಾರೆ.

ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಜನಸಾಮಾನ್ಯರು ಪ್ರತಿಭಟನೆ ನಡೆಸುವ ಅವಶ್ಯಕತೆಯಿಲ್ಲ ಮಾರಾಯ್ರೇ, ಅದನ್ನು ಜನ ಪ್ರತಿನಿಧಿಗಳೇ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಸಿರುವುದನ್ನು ಬಿಜೆಪಿ ನಾಯಕರು (BJP leaders) ಜನಾಕ್ರೋಶ ಯಾತ್ರೆ ಮೂಲಕ ರಾಜ್ಯಾದ್ಯಂತ ಪ್ರತಿಭಟಿಸುತ್ತಿದ್ದರೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಅಡುಗೆ ಅನಿಲದ ಸಿಲಿಂಡರ್ ಬೆಲೆಯೇರಿಸಿರುವುದನ್ನು ವಿರೋಧಿಸಿ ನಗರದ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟಿಸುತ್ತಿದ್ದಾರೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ವೇದಿಕೆ ಮೇಲೆ ನಿಂತು ಭಾಷಣ ಮಾಡುವಾಗ ಡಿಕೆ ಶಿವಕುಮಾರ್ ಅಲ್ಲಿಗೆ ಆಗಮಿಸುತ್ತಾರೆ. ಕೃಷ್ಣ ತಮ್ಮ ಭಾಷಣದ ಮಧ್ಯೆ ಶಿವಕುಮಾರ್ ಅವರನ್ನು ಸ್ವಾಗತಿಸುತ್ತಾರೆ.

ಇದನ್ನೂ ಓದಿ:  ಕುಮಾರಸ್ವಾಮಿ ದೊಡ್ಡೋರು, ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತಾಡುತ್ತಾರೆ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ