VIDEO: ನೋಡ್ಕೊ ಗುರು… ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
IPL 2025 DC vs RR: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 32ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 188 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಸಂಜು ಸ್ಯಾಮ್ಸನ್ ಮುಂದಾಳತ್ವದ ರಾಜಸ್ಥಾನ್ ರಾಯಲ್ಸ್ ತಂಡ 188 ರನ್ಗಳಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿತು.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 32ನೇ ಪಂದ್ಯದ ಟಾಸ್ ವೇಳೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ನಾಯಕ ಅಕ್ಷರ್ ಪಟೇಲ್ ನಾಣ್ಯದ ಎರಡೂ ಬದಿಗಳನ್ನು ತೋರಿಸಿ ಗಮನ ಸೆಳೆದಿದ್ದಾರೆ. ಟಾಸ್ ಹಾಕಲು ಕಾಯಿನ್ ಪಡೆದ ಅಕ್ಷರ್ ಪಟೇಲ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ಗೆ ನಾಣ್ಯದ ಎರಡು ಬದಿಗಳನ್ನು ತೋರಿಸಿದರು. ಈ ಮೂಲಕ ಯಾವುದೇ ಫಿಕ್ಸಿಂಗ್ ಆಗಿಲ್ಲ ಎಂಬುದನ್ನು ಸಾರಿದ್ದಾರೆ.
ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ವೇಳೆ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ನಿರ್ಧಾರವನ್ನು ಬಹಿರಂಗವಾಗಿ ತಿಳಿಸದೇ ಮ್ಯಾಚ್ ರೆಫರಿಯ ಕಿವಿಯಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ ಟಾಸ್ ಫಿಕ್ಸಿಂಗ್ ಆಗಿದೆ ಎಂಬ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು.
ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಕೆಲ ವಿಡಿಯೋಗಳಲ್ಲಿ ಐಪಿಎಲ್ ಟಾಸ್ ಕಾಯಿನ್ನ ಎರಡೂ ಭಾಗಗಳಲ್ಲಿ ಹೆಡ್ (H) ಚಿತ್ರಗಳಿರುವುದು ಸಹ ಕಂಡು ಬಂದಿತ್ತು. ಇದೇ ಕಾರಣದಿಂದಾಗಿ ಅಕ್ಷರ್ ಪಟೇಲ್ ಟಾಸ್ ಪ್ರಕ್ರಿಯೆಗೂ ಮುನ್ನ ಸಂಜು ಸ್ಯಾಮ್ಸನ್ಗೆ ನಾಣ್ಯದ ಎರಡೂ ಬದಿಗಳನ್ನು ತೋರಿಸಿರುವ ಸಾಧ್ಯತೆಯಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಇದು ಉತ್ತಮ ನಡೆ ಎಂದು ಅನೇಕರು ಅಕ್ಷರ್ ಪಟೇಲ್ ಅವರನ್ನು ಪ್ರಶಂಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 188 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ ಕೂಡ 188 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿದೆ. ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ 11 ರನ್ಗಳಿಸಿದರೆ, ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 4 ಎಸೆತಗಳಲ್ಲಿ 13 ರನ್ ಬಾರಿಸಿ ಜಯ ಸಾಧಿಸಿದೆ.