Jog waterfalls: ಧುಮ್ಮಿಕ್ಕುತ್ತಿರುವ ಜೋಗದ ಸೊಬಗು ಆಸ್ವಾದಿಸುವಾಗ ಕವಿ ನಿಸಾರ್ ಅಹಮದ್ರ ನಿತ್ಯೋತ್ಸವ ಕವನ ನೆನಪಾದರೆ ಆಶ್ಚರ್ಯವಿಲ್ಲ!
ಜನ ಜೋಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಅದರ ಸಾನಿಧ್ಯದಲ್ಲಿ ನಿಂತು ಪರವಶರಾಗಲು ಗುಂಪುಗಳಲ್ಲಿ ಆಗಮಿಸುತ್ತಿದ್ದಾರೆ.
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳಿಕಿನಲ್ಲಿ,
ಸಹ್ಯಾದ್ರಿಯ ಲೋಹದದಿ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ ನಿನಗೆ..
ಉತ್ತರ ಕನ್ನಡ: ಜೋಗದ ಸೊಬಗನ್ನು ಕವಿ ಕೆಎಸ್ ನಿಸಾರ್ ಅಹಮದ್ ಅವರಿಗಿಂತ ಚೆನ್ನಾಗಿ ಯಾರು ವರ್ಣಿಸಿಯಾರು? ಮಲೆನಾಡ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ. ಇಲ್ಲಿನ ದೃಶ್ಯ ಈಗ ರುದ್ರ ರಮಣೀಯ. ಹಾಲಿನ ನೊರೆಯಂತೆ ಧುಮ್ಮಿಕ್ಕಿತ್ತಿರುವ ನೀರು, ಸುರಿಯುವ ತುಂಗೆ ಸೃಷ್ಟಿಸುವ ಮಂಜಿನ ದಟ್ಟ ಹೊಗೆ ಇದನ್ನೆಲ್ಲ ಕಣ್ಣಾರೆ ನೋಡೋದೆ ಚಂದ ಮಾರಾಯ್ರೇ. ಜನ ಜೋಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು, ಅದರ ಸಾನಿಧ್ಯದಲ್ಲಿ ನಿಂತು ಪರವಶರಾಗಲು ಗುಂಪುಗಳಲ್ಲಿ ಆಗಮಿಸುತ್ತಿದ್ದಾರೆ. ಆಗಸದಿಂದ ವರುಣ ಸುರಿಯುತ್ತಿದ್ದರೂ ಪ್ರಕೃತಿ ಆರಾಧಕರಿಗೆ ಅದರ ಪರಿವೆ ಇಲ್ಲ. ಶನಿವಾರ ಮತ್ತು ರವಿವಾರ ಈ ಪ್ರದೇಶ ಗಿಜಿಗುಡುತಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ