ಗುತ್ತಿಗೆದಾರರ ಬಿಲ್​ಗಳು ಬಾಕಿಯುಳಿದಿರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ: ಕೆಎಂ ಶಿವಲಿಂಗೇಗೌಡ

|

Updated on: Jan 13, 2025 | 5:44 PM

ರಾಜ್ಯ ಸರ್ಕಾರಕ್ಕೆ ಅರ್ಥಿಕ ಸಂಕಷ್ಟವಿಲ್ಲ ಎಂದು ಹೇಳಿದ ಶಿವಲಿಂಗೇಗೌಡ, ಹಣಕಾಸು ಆಯೋಗದ ಬದ್ಧತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ, 15 ನೇ ಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸ್ಸು ಮಾಡಿರುವುದನ್ನು ಕುಮಾರಸ್ವಾಮಿಯವರು ಮೊದಲು ಬಿಡುಗಡೆ ಮಾಡಿಸಲಿ, ನಂತರ 15 ನೇ ಹಣಕಾಸು ಅಯೋಗದ ಮೇಲೆ ಚರ್ಚೆ ನಡೆಸಲು ಬರಲಿ, ಇದು ಅವರಿಗೆ ತನ್ನ ಸವಾಲು ಎಂದು ಹೇಳಿದರು.

ಬೆಂಗಳೂರು: ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಉತ್ತಮ ಸಂಸದೀಯ ಪಟ್ಟು ಅಂತ ಹೆಸರು ಮಾಡಿದ್ದಾರೆ. ಇವತ್ತು ಕೆಪಿಸಿಸಿ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಗುತ್ತಿಗೆದಾರರ ಬಿಲ್ ಗಳು ಬಾಕಿಯುಳಿದಿರುವುದಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ, ಕಾಂಗ್ರೆಸ್ ಅಧಿಕಾರವಹಿಸಿಕೊಳ್ಳುವ ಮೊದಲು ಸರ್ಕಾರ ನಡೆಸುತ್ತಿದ್ದ ಬಸವರಾಜ ಬೊಮ್ಮಾಯಿ ಒಂದು ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಕ್ರಿಯಾ ಯೋಜನೆಗಳನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ, ಗುತ್ತಿಗೆದಾರರಿಗೆ ನೀಡಬೇಕಿದ್ದ ₹ 40,000 ಕೋಟಿ ಹಣವನ್ನು ಬಾಕಿಯುಳಿಸಿಕೊಂಡಿದ್ದಾರೆ, ಅದರೆ ಈಗಿನ ಸರ್ಕಾರ ಎಲ್ಲ ಬಾಕಿಗಳನ್ನು ಕ್ರಮೇಣವಾಗಿ ಚುಕ್ತಾ ಮಾಡುತ್ತಿದೆ ಎಂದು ಶಿವಲಿಂಗೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Assembly Session; ಮಹಿಳೆಯರ ರಕ್ತಹೀರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಬ್ಯಾನ್ ಮಾಡಬೇಕು: ಕೆಎಂ ಶಿವಲಿಂಗೇಗೌಡ