Karnataka Assembly Session; ಮಹಿಳೆಯರ ರಕ್ತಹೀರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಬ್ಯಾನ್ ಮಾಡಬೇಕು: ಕೆಎಂ ಶಿವಲಿಂಗೇಗೌಡ
Karnataka Assembly Session: ಶಿವಲಿಂಗೇಗೌಡರ ಪ್ರಸ್ತಾವನೆ ಮತ್ತು ಆಕ್ಷೇಪಣೆಗಳಿಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಎಲ್ಲ ಮೈಕ್ರೋ ಹಣಕಾಸು ಸಂಸ್ಥೆಗಳನ್ನು ಕೆಟ್ಟವು ಅಂತ ಹೇಳಲಾಗಲ್ಲ, ಕೆಲವು ಸಂಸ್ಥೆಗಳು ಮಹಿಳೆಯರನ್ನು ಶೋಷಿಸುತ್ತಿರುವುದು ಸತ್ಯ, ಹಣಕಾಸು ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಇವತ್ತೇ ಪತ್ರ ಬರೆದು, ಜನರನ್ನು ಶೋಷಿಸುತ್ತಿರುವ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವ ಹಾಗೆ ಕಾನೂನು ಬಲಪಡಿಸಲು ಪ್ರಸ್ತಾವನೆ ಸಲ್ಲಿಸಲು ತಿಳಿಸುತ್ತೇನೆ ಎಂದರು.
ಬೆಳಗಾವಿ: ಖಾಸಗಿ ಹಣಕಾಸು ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ಮೈಕ್ರೋ ಮತ್ತು ಮ್ಯಾಕ್ರೋ ಫೈನಾನ್ಸಿಂಗ್ ಸಂಸ್ಥೆಗಳು ಬಡ ಮಹಿಳೆಯರ ರಕ್ತ ಹೀರುತ್ತಿವೆ, ಅವು ಶೇಕಡ 40ರಷ್ಟು ಬಡ್ಡಿಯನ್ನು ಮಹಿಳೆಯರಿಂದ ವಸೂಲು ಮಾಡುತ್ತಿವೆ, ಅವುಗಳ ಮರ್ಮ ಅರ್ಥ ಮಾಡಿಕೊಳ್ಳದೆ ಅನೇಕ ಮಹಿಳೆಯರು ತಮ್ಮ ಮನೆಗಳನ್ನು ಹಾಳು ಮಾಡಿಕೊಂಡಿದ್ದಾರೆ, ಮಹಿಳೆಯರನ್ನು ಹಣಕಾಸು ಸಂಸ್ಥೆಗಳ ಕಪಿಮುಷ್ಠಿಯಿಂದ ಬಿಡಿಸಬೇಕಾದರೆ ಅವುಗಳನ್ನು ಬ್ಯಾನ್ ಮಾಡಬೇಕು ಇಲ್ಲವೇ ಪರವಾನಗಿ ನೀಡುವುದನ್ನು ನಿಲ್ಲಿಸಬೇಕೆಂದು ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಸದನದಲ್ಲಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೋಕದ ಅಂಕುಡೊಂಕುಗಳನ್ನು ತಿದ್ದಲು ಬಸವಣ್ಣರನ್ನು ದೇವರು ಭೂಲೋಕಕ್ಕೆ ಕಳಿಸಿದ್ದ: ಶಿವಲಿಂಗೇಗೌಡ
Latest Videos