ಲೋಕದ ಅಂಕುಡೊಂಕುಗಳನ್ನು ತಿದ್ದಲು ಬಸವಣ್ಣರನ್ನು ದೇವರು ಭೂಲೋಕಕ್ಕೆ ಕಳಿಸಿದ್ದ: ಶಿವಲಿಂಗೇಗೌಡ
ಶಾಸಕ ಶಿವಲಿಂಗೇಗೌಡ ಬಸವಣ್ಣನವರ ಬಗ್ಗೆ ಮಾತಾಡುವಾಗ ಕೊಂಚ ಆವೇಶಭರಿತರಾಗಿದ್ದರು. ಅವರ ಮಾತುಗಳನ್ನು ತುಂಡರಿಸುವ ಪ್ರಯತ್ನವನ್ನು ಅವರ ಪಕ್ಷದವರೇ ಆಗಿರುವ ಬಸವರಾಜ ರಾಯರೆಡ್ಡಿ ಮಾಡುತ್ತಿದ್ದರು. ಪ್ರಾಯಶಃ ಅದೇ ಕಾರಣಕ್ಕೆ ಗೌಡರು ಧ್ವನಿಯೇರಿಸಿ ಮಾತಾಡಿದಾಗ ಸ್ಪೀಕರ್ ಯುಟಿ ಖಾದರ್ ಮಧ್ಯಪ್ರವೇಶಿಸಿ ಟೋನ್ ಕಮ್ಮಿ ಮಾಡುವಂತೆ ಹೇಳಿದರು.
ಬೆಳಗಾವಿ: ಅತ್ಯುತ್ತಮ ಸಂಸದೀಯ ಪಟುಗಳೆನಿಸಿಕೊಂಡಿರುವ ಕೆಲವೇ ಶಾಸಕರಲ್ಲಿ ಕಾಂಗ್ರೆಸ್ ಪಕ್ಷದ ಕೆಎಂ ಶಿವಲಿಂಗೇಗೌಡ ಕೂಡ ಒಬ್ಬರು. ಸದನದಲ್ಲಿ ಇಂದು ಬಸವಣ್ಣನವರ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಅವರು ಕೈಲಾಸ, ಭೂಲೋಕ ಮತ್ತು ಪಾತಾಳ ಲೋಕದ ಬಗ್ಗೆ ವಿವರಣೆ ನೀಡಿದರು. ಭೂಲೋಕದಲ್ಲಿ ಅವ್ಯವಸ್ಥೆಗಳು ನಡೆದಾಗ, ಅರಾಜಕತೆ ಉಂಟಾದಾಗ ಅದನ್ನು ಸರಿಪಡಿಸಲು ದೇವರೇ ಒಂದು ಅವತಾರ ತಳೆದು ಭೂಲೋಕಕ್ಕೆ ಬರುತ್ತಾನೆ ಇಲ್ಲವೇ ಯಾರನ್ನಾದರೂ ಕಳಿಸುತ್ತಾನೆ ಎಂದು ಗೌಡರು ಹೇಳಿದರು. ಹಾಗೆಯೇ, 12 ಶತಮಾನದಲ್ಲಿ ಅವ್ಯವಸ್ಥೆ ಉಂಟಾದಾಗ ದೇವರು ಬಸವಣ್ಣನವರನ್ನು ಕಳಿಸಿದ್ದ ಮತ್ತು ಅವರು ಲೋಕದ ಅಂಕುಡೊಂಕುಗಳನ್ನು ತಿದ್ದಿ ಸಮಾನತೆಯ ಸಂದೇಶ ಸಾರಿದ್ದರು ಎಂದು ಶಿವಲಿಂಗೇಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಗೆಲುವಿನ ಅಂತರ ಕಡಿಮೆಯಾದರೂ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲೋದು: ಶಿವಲಿಂಗೇಗೌಡ
Latest Videos