AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ಯೂರಿಟಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಪೂರ್ತಿಗೊಳಿಸಲು ದರ್ಶನ್ ಕೋರ್ಟ್ ಬಂದಿದ್ದರು: ದರ್ಶನ್ ವಕೀಲ

ಶ್ಯೂರಿಟಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಪೂರ್ತಿಗೊಳಿಸಲು ದರ್ಶನ್ ಕೋರ್ಟ್ ಬಂದಿದ್ದರು: ದರ್ಶನ್ ವಕೀಲ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Dec 16, 2024 | 5:37 PM

Share

ಚಿಕಿತ್ಸೆಗಾಗಿ ದರ್ಶನ್ ತೂಗುದೀಪಗೆ ಮಧ್ಯಂತರ ಜಾಮೀನು ಮಂಜೂರು ಮಾಡುವಾಗ ಹೈಕೋರ್ಟ್ ಅವರ ಪಾಸ್ಪೋರ್ಟ್ ಅನ್ನು ಸರೆಂಡರ್ ಮಾಡಿಸಿಕೊಂಡಿತ್ತು. ಆದರೆ ಈಗ ಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದರಿಂದ ಅದನ್ನು ಸರೆಂಡರ್ ಮಾಡುವ ಅವಶ್ಯಕತೆಯಿಲ್ಲ, ಕೋರ್ಟ್ ಅದನ್ನು ವಾಪಸ್ಸು ನೀಡಿದೆ ಎಂದು ಅವರ ಪರ ವಕೀಲ ಹೇಳಿದರು. ದರ್ಶನ್ ಈಗ ಪುನಃ ಆಸ್ಪತ್ರೆಗೆ ವಾಪಸ್ಸಾಗಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿಯಾಗಿರುವ ನಟ ದರ್ಶನ್ ಗೆ ಉಚ್ಚ ನ್ಯಾಯಲಯದಿಂದ ಷರತ್ತುಬದ್ಧ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರೈಸಲು ಇಂದು ನ್ಯಾಯಾಲಯಕ್ಕೆ ಆಗಮಿಸಿದ್ದರು. ಅವರು ಹೈಕೋರ್ಟ್ ಗೆ ಬಂದುಹೋದ ವಿಚಾರವನ್ನು ಮಾಧ್ಯಮದವರಿಗೆ ವಿವರಿಸಿದ ಅವರ ವಕೀಲ, ಶ್ಯೂರಿಟಿಗಳನ್ನು ಸಲ್ಲಿಸಲು ಅವರು ಆಸ್ಪತ್ರೆಯಿಂದ ಹೈಕೋರ್ಟ್ ಗೆ ಬಂದಿದ್ದರು, ಶ್ಯೂರಿಟಿಗಳನ್ನು ಸಲ್ಲಿಸುವುದು ಜಾಮೀನು ಪಡೆಯುವ ಎಲ್ಲ ಆರೋಪಿಗಳಿಗೆ ಅನ್ವಯವಾಗುವ ವಿಷಯ ಕೇವಲ ದರ್ಶನ್​ಗೆ ಮಾತ್ರ ಅಲ್ಲ ಎಂದು ವಕೀಲ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್ ಆರೋಪಿಯೇ ಹೊರತು ಅಪರಾಧಿಯಲ್ಲ, ಆರೋಪಗಳು ಎಲ್ಲರ ಮೇಲೂ ಬರುತ್ತವೆ: ಭವ್ಯಾ, ಅಭಿಮಾನಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.