ತಾಲಿಬಾನ್ ಪಡೆಗಳು ಪಂಜಶೀರ್ ಪ್ರಾಂತ್ಯವನ್ನು ವಶಪಡಿಸಿಕೊಂಡಿದ್ದೇವೆ ಅನ್ನುತ್ತಿದ್ದರೆ, ಈ ವಿಡಿಯೋ ಭಿನ್ನ ಕತೆ ಹೇಳುತ್ತಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2021 | 12:36 AM

ತಾಲಿಬಾನಿಗಳು ಸುಳ್ಳು ಹೇಳುತ್ತಿದ್ದಾರೆಯೇ? ಜನರನ್ನು ಮಿಸ್​ಗೈಡ್​ ಮಾಡುತ್ತಿದ್ದಾರೆಯೇ? ನಾವು ಈ ಮೊದಲು ಚರ್ಚಿಸಿದ ಹಾಗೆ ಪಂಜಶೀರ್ ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ, ಕೊನೆಯುಸಿರಿನವರೆಗೆ ಹೋರಾಡುತ್ತಾರೆ. ಈ ವಿಡಿಯೋ ಆ ಮಾತನ್ನು ಖಚಿತಪಡಿಸುತ್ತದೆ.

ತಾಲಿಬಾನ ನಾಯಕರ ಹೇಳಿಕೆಗಳು, ಅವರು ಪಂಜಶೀರ್ ಗವರ್ನರ್ ಕಚೇರಿಯ ಮೇಲೆ ಧ್ವಜ ಹಾರಿಸಿದ್ದು ಎಲ್ಲವನ್ನು ಗಮನಿಸುತ್ತಿದ್ದರೆ ತಾಲಿಬಾನ್ ಪಂಜಶೀರ್ ಪ್ರಾಂತ್ಯವೂ ಸೇರಿದಂತೆ ಪೂರ್ತಿ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿರುವುದು ವೇದ್ಯವಾಗುತ್ತದೆ. ಮಂಗಳವಾರದಂದು ತಾಲಿಬಾನ್ ಬಾತ್ಮೀದಾರ ಜಬಿಹುಲ್ಲಾಹ್ ಮುಜಾಹಿದ್, ‘ಪ್ರತಿರೋಧ ದಳದ ಅನೇಕರು ನಮ್ಮೊಂದಿಗೆ ಯುದ್ಧ ನಡೆಸಿ ಸೋತರು ಮತ್ತು ಕೆಲವರು ಪಲಾಯನಗೈದರು,’ ಅಂತ ಹೇಳಿದ್ದಾನೆ. ‘ದಬ್ಬಾಳಿಕೆಗೆ ಒಳಗಾಗಿದ್ದ ಗೌರವಾನ್ವಿತ ಪಂಜಶೀರ್ ಜನ ತಮ್ಮನ್ನು ಒತ್ತೆಯಾಳಗಳನ್ನಾಗಿ ಮಾಡಿಕೊಂಡಿದ್ದ ಜನರಿಂದ ಮುಕ್ತರಾಗಿದ್ದಾರೆ,’ ಎಂದು ಮುಜಾಹಿದ್ ಹೇಳಿದ್ದು ಪಂಜಶೀರ್ ಜನರನ್ನು ಗೌರವದಿಂದ ನೋಡಿಕೊಳ್ಳುವುದಾಗಿ ಪ್ರಕಟಿಸಿದ್ದಾನೆ

ಓಕೆ, ಅವನ ಮಾತನ್ನು ನಂಬಬಹುದು ಮತ್ತು ನಂಬತಕ್ಕದ್ದೇ. ಇಲ್ಲಿರುವ ವಿಡಿಯೋ ನಮಗೆ ಸಿಗದೆ ಹೋಗಿದ್ದರೆ, ನಾವೆಲ್ಲ ಜಬಿಹುಲ್ಲಾಹ್ ಮುಜಾಹಿದ್ ಹೇಳರುವುದನ್ನು ಆಕ್ಷರಶಃ ನಂಬುತ್ತಿದ್ದೆವು. ಆದರೆ ಈ ವಿಡಿಯೋ ನೋಡಿ, ಎರಡು ಸೇನಾಪಡೆಗಳ ನಡುವೆ ಯುದ್ಧ ನಡೆಯುವದನ್ನು ನೋಡಿರದವರಿಗೆ ರಾತ್ರಿ ಸಮಯದಲ್ಲಿ ನಡೆಯುವ ಯುದ್ಧದ ಒಂದು ಪರ್ಫೆಕ್ಟ್ ಚಿತ್ರಣ ಇಲ್ಲಿದೆ. ತಾಲಿಬಾನ್ ಮತ್ತು ಪಂಜಶೀರ್ ಪಡೆಗಳ ನಡುವೆ ಭೀಕರ ಗುಂಡಿನ ಕಾಳಗ ನಡೆಯುತ್ತಿದೆ. ಇದು ಹಳೆಯ ವಿಡಿಯೋ ಏನೂ ಅಲ್ಲ, ಸೋಮವಾರ ರಾತ್ರಿಯದ್ದು.

ಹಾಗಾದರೆ, ತಾಲಿಬಾನಿಗಳು ಸುಳ್ಳು ಹೇಳುತ್ತಿದ್ದಾರೆಯೇ? ಜನರನ್ನು ಮಿಸ್​ಗೈಡ್​ ಮಾಡುತ್ತಿದ್ದಾರೆಯೇ? ನಾವು ಈ ಮೊದಲು ಚರ್ಚಿಸಿದ ಹಾಗೆ ಪಂಜಶೀರ್ ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ, ಕೊನೆಯುಸಿರಿನವರೆಗೆ ಹೋರಾಡುತ್ತಾರೆ. ಈ ವಿಡಿಯೋ ಆ ಮಾತನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: RGV: ಆರ್​ಜಿವಿ ನೃತ್ಯದ ಮತ್ತೊಂದು ವಿಡಿಯೊ ವೈರಲ್; ಸ್ವತಃ ವಿಡಿಯೊ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ ಇನಯಾ