ಬಿಕ್ಲು ಶಿವ ಕೊಲೆ ಪ್ರಕರಣ: ಅರೋಪಿ ನಂ.1 ಜಗದೀಶ್​ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಕೋರ್ಟ್

Updated on: Jul 24, 2025 | 7:05 PM

ಬಿಕ್ಲು ಕೊಲೆ ಪ್ರಕರಣದಲ್ಲಿ ಇದುವರೆಗೆ 15 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆದರೆ, ಪ್ರಮುಖ ಅರೋಪಿ ಜಗದೀಶ್ ಮಾತ್ರ ಇದುವರಗೆ ಸೆರೆಸಿಕ್ಕಿಲ್ಲ. ಶಿವನ ಕೊಲೆಯಾದ ಮರುದಿನ ಅವನ ತಾಯಿ ವಿಜಯಲಕ್ಷ್ಮಿ ಭಾರತೀನಗರ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರು ಮತ್ತು ಅದರಲ್ಲಿ ಕೆಅರ್ ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ ಸೇರಿದಂತೆ ಐವರ ಹೆಸರನ್ನು ಉಲ್ಲೇಖಿಸಿದ್ದಾರೆ.

ಬೆಂಗಳೂರು, ಜುಲೈ 24: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣದಲ್ಲಿ ಆರೋಪಿ ನಂವರ್ ವನ್ ಆಗಿರುವ ಜಗದೀಶ್ ಅಲಿಯಾಸ್ ಜಗ್ಗ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಮನವಿಯು ತಿರಸ್ಕೃತಗೊಂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಗದೀಶ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿ ಅವರ ಮನವಿಯು ಈ ಕೊಲೆ ಪ್ರಕರಣದಲ್ಲಿ ಪರಿಗಣನೆಗೆ ಅರ್ಹವಲ್ಲ ಎಂದು ಹೇಳಿದೆ. ಏತನ್ಮಧ್ಯೆ, ರಾಜ್ಯ ಸರ್ಕಾವು ಬಿಕ್ಲು ಶಿವ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದೆ.

ಇದನ್ನೂ ಓದಿ:  ಬಿಕ್ಲು ಶಿವ ಕೊಲೆ ಕೇಸ್: ಬಗೆದಷ್ಟು ಬಯಲಾಗ್ತಿವೆ ಸ್ಫೋಟಕ ಮಾಹಿತಿ, ಆರೋಪಿಗೆ ನಟ-ನಟಿಯರ ಜತೆಗೂ ನಂಟು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jul 24, 2025 07:04 PM