ಹೆಚ್ಚಿದ ಕೋವಿಡ್-19 ಸೋಂಕಿನ ಭೀತಿ, ಬೆಂಗಳೂರು ಮೆಟ್ರೊ ರೈಲು ನಿಲ್ದಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಕ್ರಮೇಣ ಜಾರಿ!

ಹೆಚ್ಚಿದ ಕೋವಿಡ್-19 ಸೋಂಕಿನ ಭೀತಿ, ಬೆಂಗಳೂರು ಮೆಟ್ರೊ ರೈಲು ನಿಲ್ದಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಕ್ರಮೇಣ ಜಾರಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 23, 2022 | 5:33 PM

ಬೆಂಗಳೂರಿನಲ್ಲಿ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಜಾರಿಗೆ ತರಲಾಗುತ್ತಿದೆ.

ಬೆಂಗಳೂರು: ದೇಶದಲ್ಲಿ ಮತ್ತೊಮ್ಮೆ ಕೊರೋನಾ ಭೀತಿ ಶುರುವಾಗಿದೆ. ಮೂರನೇ ಅಲೆಯ ಬಗ್ಗೆ ಆತಂಕಗೊಂಡಿದ್ದ ನಾವು ಅದು ಅಪ್ಪಳಿಸದೆ ಹೋದಾಗ ನಿರಾಳವಾಗಿದ್ದೆವು ಮತ್ತು ನಿರಾತಂಕದಿಂದ ಓಡಾಡುತ್ತಿದ್ದೆವು. ಚೀನಾದಲ್ಲಿ (China) ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಭಾರತವೂ (India) ಸೇರಿದಂತೆ ವಿಶ್ವದೆಲ್ಲೆಡೆ ಸರ್ಕಾರಗಳು ಮತ್ತು ಜನ ಗಾಬರಿಗೊಳಗಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಮೆಟ್ರೋ (Metro) ರೈಲು ನಿಲ್ದಾಣಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಜಾರಿಗೆ ತರಲಾಗುತ್ತಿದೆ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಮಾಡಿರುವ ಈ ವಾಕ್ ಥ್ರೂ ಕೇಳಿಸಿಕೊಳ್ಳಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ