ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಮನಕಲುಕುವ ದೃಶ್ಯ ಮೊಬೈಲ್​ನಲ್ಲಿ ಸೆರೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 10, 2023 | 7:00 PM

ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ ಮಾಡುವ ಮನಕಲುಕುವ ದೃಶ್ಯಗಳ ಗದಗ(Gadag) ನಗರದ ತೋಂಟದಾರ್ಯ ಮಠದ ಬಳಿ ಕಂಡು ಬಂದಿದೆ. ನಿನ್ನೆ(ಡಿ.10) ಸಂಜೆ ಈ ಘಟನೆ ನಡೆದಿದ್ದು,  ಕರುವಿಗೆ ಜನ್ಮ ನೀಡಿದ ಆಕಳು(Cow) ಬಳಿಕ ಯಾರನ್ನೂ ಹತ್ತಿರ ಸುಳಿಯಲು ಬಿಟ್ಟಿಲ್ಲ.

ಗದಗ, ಡಿ.10: ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ ಮಾಡುವ ಮನಕಲುಕುವ ದೃಶ್ಯಗಳ ಗದಗ(Gadag) ನಗರದ ತೋಂಟದಾರ್ಯ ಮಠ(Tontadarya Matha)ದ ಬಳಿ ಕಂಡು ಬಂದಿದೆ. ನಿನ್ನೆ(ಡಿ.10) ಸಂಜೆ ಈ ಘಟನೆ ನಡೆದಿದ್ದು,  ಕರುವಿಗೆ ಜನ್ಮ ನೀಡಿದ ಆಕಳು(Cow) ಬಳಿಕ ಯಾರನ್ನೂ ಹತ್ತಿರ ಸುಳಿಯಲು ಬಿಟ್ಟಿಲ್ಲ. ನನ್ನ ಕಂದನಿಗೆ ಯಾರಾದ್ರೂ ಏನಾದರೂ ಮಾಡುತ್ತಾರೆ ಎಂದು ರಕ್ಷಣೆಗೆ ನಿಂತಿದೆ. ಕರುವಿನ ಸಮೀಪ ಬಂದ ಜನರಿಗೆ ತಾಯಿ ಆಕಳು ಹಾಯುತ್ತಿತ್ತು. ನನ್ನ ಕಂದನಿಗೆ ಏನಾದ್ರೂ ಮಾಡ್ತಾರೆ ಎನ್ನುವ ಆತಂಕ ತಾಯಿ ಆಕಳಿನ ವರ್ತನೆಯಿಂದ ಕಂಡು ಬಂತು. ಕರುವಿನ ರಕ್ಷಣೆಗಾಗಿ ಸನಿಹ ಬಂದವ್ರಿಗೆ ಆಕಳು ಹಾಯುತ್ತಿತ್ತು. ಆಕಳು ತಾಯಿಯ ಕರುಳಿನಕುಡಿಯ ಪ್ರೀತಿಗೆ ಗದಗ ಜನರು ಮನಸೋತ್ತಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

Follow us on