ಪ್ರಜ್ವಲ್ ಪ್ರಕರಣ: ಡಿಕೆ ಶಿವಕುಮಾರ್ಗೆ ಗಂಡಾಂತರ ಕಾದಿದೆ ಎಂದ ಸಿಪಿ ಯೋಗೇಶ್ವರ್
CP Yogeshwar Lashes out Against DK Shivkumar: ಡಿಕೆ ಶಿವಕುಮಾರ್ ಪಿತೂರಿ ಮಾಡಿ, ತೇಜೋವಧಿ ಮಾಡಿ ಒಕ್ಕಲಿಗರ ನಾಯಕತ್ವ ಪಡೆಯಲು ಆಗುವುದಿಲ್ಲ. ಅದನ್ನು ಜನರು ಕೊಡಬೇಕು. ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಎಂಎಲ್ಸಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಪಿತೂರಿ ಮಾಡಿದ್ದಾರೆಂದು ಆರೋಪಿಸಿರುವ ಸಿಪಿ ಯೋಗೇಶ್ವರ್, ಡಿಕೆಶಿಗೆ ಗಂಡಾಂತರ ಕಾದಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಮನಗರ, ಮೇ 8: ಪಿತೂರಿ ಮಾಡಿ, ತೇಜೋವಧೆ ಮಾಡಿ ನಾಯಕರಾಗಲು ಸಾಧ್ಯವಿಲ್ಲ. ಪ್ರೀತಿಯಿಂದ ನಾಯಕತ್ವ ಪಡೆಯಬೇಕು ಎಂದು ವಿಧಾನಪರಿಷತ್ ಸದಸ್ಯ ಮತ್ತು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ (CP Yogeeshwara) ಪ್ರತಿಪಾದಿಸಿದ್ದಾರೆ. ಒಕ್ಕಲಿಗರ ನಾಯಕತ್ವ ಪಡೆಯುವ ವಿಚಾರವಾಗಿ ಡಿಕೆ ಶಿವಕುಮಾರ್ ಅವರತ್ತ ಸಿಪಿವೈ ಬೊಟ್ಟು ಮಾಡಿದ್ದಾರೆ. ಪ್ರಜ್ವಲ್ ಪ್ರಕರಣದ ಮೂಲಕ ದೇವೇಗೌಡರ ಕುಟುಂಬದ ತೇಜೋವಧಿ ಮಾಡಿ ತಾನು ಒಕ್ಕಲಿಗರ ನಾಯಕನಾಗಲು ಡಿಕೆ ಶಿವಕುಮಾರ್ ಹೊರಟಿದ್ದಾರೆ ಎಂಬುದು ಯೋಗೇಶ್ವರ್ ಆರೋಪ.
ಒಕ್ಕಲಿಗರ ನಾಯಕತ್ವ ಯಾರಿಗೆ ಹೋಗಬೇಕು ಅಂತ ಜನರು ನಿರ್ಧರಿಸಬೇಕು. ಚುನಾವಣೆಯಲ್ಲಿ ಜನರು ಬೆಂಬಲಿಸಬೇಕು. ಪಿತೂರಿ ಮಾಡಿ ನಾಯಕತ್ವ ಪಡೆಯಲು ಆಗಲ್ಲ. ಪ್ರಜ್ವಲ್ ಪಕ್ರರಣ ಹೊರಬಂದಾಗ ದೇವೇಗೌಡರ ಕುಟುಂಬದ ಬಗ್ಗೆ ಡಿಕೆ ಶಿವಕುಮಾರ್ ಏನೆಲ್ಲಾ ಮಾತಾಡಿದ್ರು. ಈಗ ಎಷ್ಟು ಸಾಫ್ಟ್ ಆಗಿ ಮಾತಾಡ್ತಿದಾರೆ ನೋಡಿ ಎಂದು ಹೇಳಿರುವ ಯೋಗೇಶ್ವರ್, ದ್ವೇಷದ ಕಾರ್ಯ ಸಾಧಿಸುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಗಂಡಾಂತರ ಕಾದಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಜ್ವಲ್ ಪ್ರಕರಣದಲ್ಲಿ ಎಸ್ಐಟಿ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಪಿ ಯೋಗೇಶ್ವರ್, ತನಿಖೆಯಲ್ಲಿ ಅಧಿಕಾರ ದುರುಪಯೋಗ ನೂರಕ್ಕೆ ನೂರು ಆಗಿದೆ. ಡ್ರೈವರ್ ಇಲ್ಲೇ ಇದ್ರೂ ಅವನನ್ನು ಕರೆಸಿ ವಿಚಾರಣೆ ಮಾಡಲಿಲ್ಲ. ರೇವಣ್ಣರನ್ನು ಬಂಧಿಸಿದ್ದಾರೆ. ಈ ತನಿಖೆಯಲ್ಲಿ ನ್ಯಾಯ ಸಿಗಲ್ಲ. ಸಿಬಿಐಗೋ ಅಥವಾ ಉನ್ನತ ಮಟ್ಟದ ತನಿಖೆಯೋ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ; ಎಸ್ಐಟಿ ತನಿಖೆ ಒನ್ ವೇನಲ್ಲಿ ಸಾಗುತ್ತಿರುವ ಕಾರಣ ಸಿಬಿಐಗೆ ವಹಿಸಿಕೊಡಬೇಕು: ಜಿಟಿ ದೇವೇಗೌಡ
ದೇವರಾಜೇಗೌಡರ ಬಳಿ ಸುಮಾರು ಗಂಟೆಯ ಆಡಿಯೋ ಇದೆ. ಅದರಲ್ಲಿ ಸ್ವಲ್ಪ ಮಾತ್ರವೇ ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಇದರಲ್ಲಿ ಡಿಕೆ ಶಿವಕುಮಾರ್ ಕೈವಾಡ ನೂರಕ್ಕೆ ನೂರು ಇದೆ. ಪೂರ್ತಿ ಆಡಿಯೋವನ್ನು ಸಿಬಿಐ ತನಿಖಾ ಸಂಸ್ಥೆಗೆ ಬೇಕಾದರೆ ಕೊಡುತ್ತೇನೆ ಎಂದು ಚನ್ನಪಟ್ಟಣದ ಮಾಜಿ ಶಾಸಕರು ಹೇಳಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ