ಕೆರೆ ಉಳಿಸಲು ಜಿಂದಾಲ್ ಸಂಸ್ಥೆ ವಿರುದ್ಧ ಹೋರಾಟ ಮಾಡಿದ ವೃದ್ಧರಿಗೆ ಸಿಪಿಐ ಧಮ್ಕಿ!
ಜಿಂದಾಲ್ ಸಂಸ್ಥೆ ಒತ್ತುವರಿ ಮಾಡಿದ್ದ ಕೆರೆ ಜಮೀನು ಬಿಡಿಸುವ ಸಂಬಂಧ 15 ವರ್ಷಗಳಿಂದಲೂ ರಾಮಕೃಷ್ಣಯ್ಯ ಹೋರಾಟ ಮಾಡುತ್ತಾ ಬಂದಿದ್ದಾರೆ. ಬಟ್ಟೆ ಬಿಚ್ಚಿಸಿ ಜೈಲಿಗೆ ಹಾಕುವುದಾಗಿ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ. ಮಾದನಾಯಕನಹಳ್ಳಿ ಇನ್ಸೆಪೆಕ್ಟರ್ ಮುರುಳೀಧರ್ ಹೋರಟಗಾರ ರಾಮಕೃಷ್ಣಯ್ಯರಿಗೆ ಧಮ್ಕಿ ಹಾಕಿದ್ದಾರೆ.
ನೆಲಮಂಗಲ, ಜನವರಿ 19: ಕೆರೆ ಉಳಿಸಲು ಜಿಂದಾಲ್ ಸಂಸ್ಥೆ ವಿರುದ್ಧ ಹೋರಾಟ ಮಾಡಿದ ವೃದ್ಧರಿಗೆ ಸಿಪಿಐ (CPI) ಧಮ್ಕಿ ಹಾಕಿದ್ದಾರೆ. ಬಟ್ಟೆ ಬಿಚ್ಚಿಸಿ ಜೈಲಿಗೆ ಹಾಕುವುದಾಗಿ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ. ಮಾದನಾಯಕನಹಳ್ಳಿ ಇನ್ಸೆಪೆಕ್ಟರ್ ಮುರುಳೀಧರ್ ಹೋರಟಗಾರ ರಾಮಕೃಷ್ಣಯ್ಯರಿಗೆ ಧಮ್ಕಿ ಹಾಕಿದ್ದಾರೆ. ಮಾದವಾರದ ಕೆರೆ ವಿಷಯದಲ್ಲಿ ಇನ್ಸ್ವ್ ಪೆಕ್ಟರ್ ಮುರಳೀಧರ ಕಂಪನಿ ಪರ ಬ್ಯಾಟಿಂಗ್ ಆರೋಪ ಮಾಡಲಾಗಿದೆ. ವೃದ್ದ ರಾಮಕೃಷ್ಣಯ್ಯರನ್ನ ಠಾಣೆಗೆ ಕರೆಸಿ ವಯಸ್ಸಿಗೆ ಗೌರವ ಕೊಡದೆ ಬಾಯಿಗೆ ಬಂದಂತೆ ಬೆದರಿಕೆ ಹಾಕಿದ್ದು, ಜಿಂದಾಲ್ ತಂಟೆಗೆ ಹೋಗದಂತೆ ಪೊಲೀಸ್ ಠಾಣೆಯಲ್ಲಿ ಅವಾಜ್ ಹಾಕಿದ್ದಾರೆ. ಜಿಂದಾಲ್ ಸಂಸ್ಥೆ ಒತ್ತುವರಿ ಮಾಡಿದ್ದ ಕೆರೆ ಜಮೀನು ಬಿಡಿಸುವ ಸಂಬಂಧ 15 ವರ್ಷಗಳಿಂದಲೂ ರಾಮಕೃಷ್ಣಯ್ಯ ಹೋರಾಟ ಮಾಡುತ್ತಾ ಬಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos