ಆನೆಗೊಂದಿ: ತಡರಾತ್ರಿ ಮನೆಗೇ ಬಂತು ಮೊಸಳೆ! ವಿಡಿಯೋ ನೋಡಿ
ತುಂಗಭದ್ರಾ ನದಿಯಿಂದ ಮೊಸಳೆಯೊಂದು ಮನೆಗೆ ಬಂದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬೆಚ್ಚಿಬಿದ್ದ ಮನೆಯವರು ಹಾಗೂ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನು ರಕ್ಷಿಸಿದ್ದಾರೆ. ಘಟನೆಯ ವಿಡಿಯೋ ಇಲ್ಲಿದೆ.
ಕೊಪ್ಪಳ, ನವೆಂಬರ್ 22: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಶುಕ್ರವಾರ ರಾತ್ರಿ ಮೂರು ಗಂಟೆ ಸುಮಾರಿಗೆ ಮೊಸಳೆಯೊಂದು ಮನೆಗೆ ಬಂದಿದೆ. ಆನೆಗೊಂದಿ ಗ್ರಾಪಂ ಪಕ್ಕದ ವೆಂಕಟರಮಣ ಎಂಬವರ ಮನೆ ಜಗುಲಿಗೆ ಮೊಸಳೆ ಬಂದಿದೆ. ತುಂಗಭದ್ರಾ ನದಿಯಿಂದ ಮೊಸಳೆ ಗ್ರಾಮಕ್ಕೆ ಬಂದಿದೆ ಎನ್ನಲಾಗಿದೆ. ಕೂಡಲೇ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮನೆಗೆ ಬಂದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.