ಸಾಮಾಜಿಕ ಜಾಲತಾಣದಲ್ಲಿ ಆಗೊಂದು ಈಗೊಂದು ಎಂಬಂತೆ ಅಚ್ಚರಿಯ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಅದರಂತೆ, ಸಾಮಾಜಿಕ ಜಾಲತಾಣದಲ್ಲಿ ಮೊಸಳೆ (Crocodile) ವಿಡಿಯೋವೊಂದು ಭಾರಿ ವೈರಲ್ (Viral video) ಆಗುತ್ತಿದೆ. ಹೇಳಿ ಕೇಳಿ ಮೊಸಳೆ ನೀರಿನಲ್ಲೂ ಇರುತ್ತದೆ, ಭೂಮಿ ಮೇಲೂ ಬದುಕುತ್ತದೆ. ನದಿ ಬಿಟ್ಟು ಆಹಾರ ಹುಡುಕಾಡುತ್ತಾ ಗ್ರಾಮಗಳಿಗೆ ನುಗ್ಗುವುದನ್ನೂ ನೋಡಿದ್ದೇವೆ. ಇದೀಗ ಮೊಸಳೆಯೊಂದು ನದಿಯೊಂದಕ್ಕೆ ಅಡ್ಡಲಾಗಿ ಕಟ್ಟಿದ ಸೇತುವೆ ಮೇಲೆ ಹತ್ತಿ ನೀರಿರುವ ಸ್ಥಳಕ್ಕೆ ಹೋಗುವ ದೃಶ್ಯಾವಳಿ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್ ಜೋಹರ್ಗೆ ಅನಿಲ್ ಕಪೂರ್ ವಾರ್ನಿಂಗ್; ವಿಡಿಯೋ ವೈರಲ್
ವೈರಲ್ ವಿಡಿಯೋ ಗಮನಿಸಿದಾಗ, ನೀರು ಹರಿದು ಹೋಗದಂತೆ ಸೇತುವೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಒಂದು ಭಾಗದಲ್ಲಿ ನೀರಿನ ಹರಿವು ಇಲ್ಲವಾಗಿದೆ. ಈ ಜಾಗದಲ್ಲಿದ್ದ ಸುಮಾರು 10 ಅಡಿ ಉದ್ದದ ಮೊಸಳೆಯೊಂದು ಆ ಸೇತುವೆ ಮೇಲೆ ಹತ್ತಿ ನೀರು ತುಂಬಿದ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಹೀಗೆ ಹೋದ ಮೊಸಳೆಯ ಶೈಲಿ ನೆಟ್ಟಿಗರ ಗಮನ ಸೆಳೆದಿದೆ. ಅಲ್ಲದೆ, ಭಾರಿ ವೈರಲ್ ಕೂಡ ಆಗುತ್ತಿದೆ. ಈ ವಿಡಿಯೋವನ್ನು ಹೆಲಿಕಾಪ್ಟರ್ ಯಾತ್ರಾ ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, 2.9 ಮಿಲಿಯನ್ ವೀಕ್ಷಣೆ ಕಂಡಿದ್ದು, 129k ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಕರ್ನಾಟಕದ ಕರಾವಳಿ ದಂಡೆಯ ರಸ್ತೆ ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ | ನಾರ್ವೇ ದೇಶದ ಪ್ರಜೆ ಟ್ವೀಟ್
ಇದನ್ನೂ ಓದಿ: ಕೊವಿಡ್ ಭೀತಿ: ಸೌದಿ ಪ್ರಜೆಗಳಿಗೆ ಭಾರತ ಸೇರಿ 15 ದೇಶಗಳಿಗೆ ಸಂಚಾರ ನಿರ್ಬಂಧ
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ