ಧಾರಾಕಾರ ಮಳೆಗೆ ದಾವಣಗೆರೆ ಜಿಲ್ಲೆಯ ಕೆರೆಗಳು ಭರ್ತಿ, ಏರಿ ಒಡೆದು ಜಮೀನುಗಳಿಗೆ ನುಗ್ಗಿದ ನೀರು

|

Updated on: Oct 18, 2024 | 10:27 AM

ಮಳೆಯಾಗದಿದ್ದರೆ ಮತ್ತು ಅಗತ್ಯಕ್ಕಿಂತ ಜಾಸ್ತಿ ಮಳೆಯಾದರೆ ರೈತರಿಗೆ ಬವಣೆ ತಪ್ಪಿದ್ದಲ್ಲ. ಬುಧವಾರ ರಾತ್ರಿ ಸುರಿದ ಮಳೆಗೆ ದಾವಣಗೆರೆ ಜಿಲ್ಲೆಯಲ್ಲಿರುವ ಕೆರೆಗಳೆಲ್ಲ ಭರ್ತಿಯಾಗಿವೆ. ಮಳೆ ಸುರಿದ ಬಗ್ಗೆ ರೈತರು ನೆಮ್ಮದಿ ತಳೆಯುವಂತೆಯೇ ಕೆರೆಗಳು ಉಕ್ಕಿ ಹರಿಯುತ್ತಿರುವ, ಕೋಡಿ ಹರಿದ ಇಲ್ಲವೇ ಏರಿ ಒಡೆದ ಸಮಸ್ಯೆ ಎದುರಾಗಿದೆ.

ದಾವಣಗೆರೆ: ಜಿಲ್ಲೆಯಾದ್ಯಂತ ನಿನ್ನೆ ಧಾರಾಕಾರವಾಗಿ ಮಳೆ ಸುರಿದ ಸಂಗತಿಯನ್ನು ವರದಿ ಮಾಡಲಾಗಿದೆ. ಇವತ್ತು ಮಳೆಯಾಗುತ್ತಿಲ್ಲವಾದರೂ ಮೋಡಕವಿದ ವಾತಾವರಣವಿದೆ ಮತ್ತು ಅಲ್ಲಲ್ಲಿ ಜಿನುಗು ಮಳೆಯಾಗುತ್ತಿದೆ. ನಿನ್ನೆಯ ಭಾರೀ ಮಳೆಗೆ ಕೆರೆಗಳೆಲ್ಲ ತುಂಬಿವೆ ಮತ್ತು ಜಿಲ್ಲೆಯ ಕರೇಮಾಗನಹಳ್ಳಿಯ ಕೆರೆ ಏರಿ ಒಡೆದು ಹೋಗಿದ್ದು ಕೆರೆಯ ನೀರು ಜಮೀನುಗಳಿಗೆ ಹರಿಯುತ್ತಿದೆ. ನೀರು ಪೋಲಾಗುವುದರ ಜೊತೆಗೆ ರೈತರ ಬೆಳೆಗಳು ಸಹ ಹಾಳಾಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದಾವಣಗೆರೆ: ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ, ಜನಜೀವನ ಅಸ್ತವ್ಯಸ್ತ