ಬೆಂಗಳೂರು: ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳದ್ದೇ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್

ಬೆಂಗಳೂರು: ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳದ್ದೇ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್

Mangala RR
| Updated By: Ganapathi Sharma

Updated on: Oct 18, 2024 | 11:02 AM

ಇತ್ತೀಚೆಗೆಷ್ಟೇ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿಗೆ ಡಿಸಿಎಂ ಡಿಕೆ ಶಿವಕುಮಾರ್ ಗಡುವು ನೀಡಿದ್ದರು. ಅದರಂತೆ ಸಾವಿರಾರು ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು. ಆದರೀಗ 2-3 ದಿನ ಸುರಿದ ಮಳೆ ವಾಸ್ತವವನ್ನು ಬಯಲು ಮಾಡಿದೆ. ಮೆಜೆಸ್ಟಿಕ್​​ನ ಬಿಎಂಟಿಸಿ ಬಸ್​​ ನಿಲ್ದಾಣದ ಬಳಿ ಸಾಲು ಸಾಲು ರಸ್ತೆಗುಂಡಿಗಳು ಕಾಣಿಸುತ್ತಿವೆ.

ಬೆಂಗಳೂರು, ಅಕ್ಟೋಬರ್ 18: ಮಳೆ ಬಂದರೆ ಸಾಕು ಬೆಂಗಳೂರಿನಲ್ಲಿ ಯಮರೂಪಿ ರಸ್ತೆ ಗುಂಡಿಗಳು ಪ್ರತ್ಯಕ್ಷವಾಗುತ್ತವೆ. ನಗರದ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್​​ನಲ್ಲಿ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಮಳೆ ಬಂದು ಬಿಡುತ್ತಿದ್ದಂತೆಯೇ ಅನೇಕ ರಸ್ತೆಗುಂಡಿಗಳು ಪ್ರತ್ಯಕ್ಷವಾಗಿವೆ. ದಿನಕ್ಕೆ ಸಾವಿರಾರು ಬಿಎಂಟಿಸಿ ಬಸ್​​ಗಳು ಇಲ್ಲಿ ಓಡಾಡುತ್ತವೆ. ವಾಹನ ಸವಾರರು ಹಾಗೂ ಬಸ್​ನಲ್ಲಿ ಪ್ರಯಾಣಿಸುವ ಜನರಿಗೂ ರಸ್ತೆ ಗುಂಡಿಗಳಿಂದ ತೊಂದರೆಯಾಗುತ್ತಿದೆ.

ಗುಂಡಿಯಲ್ಲಿ ವಾಹನ ಚಲಾಯಿಸುವ ಕಾರಣ ಬಸ್​​​ಗಳ ಆಕ್ಸಲ್ ಕಟ್ ಆಗುತ್ತವೆ. ಜೊತೆಗೆ ವಯಸ್ಸಾದ ಸವಾರರಿಗೂ ಬೆನ್ನು ನೋವಿನಂತಹ ಸಮಸ್ಯೆಗಳು ಹೆಚ್ಚಾಗಲು ರಸ್ತೆ ಗುಂಡಿಗಳು ಕಾರಣವಾಗುತ್ತಿವೆ. ಇಷ್ಟಾದರೂ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ