ಅಭಿವೃದ್ಧಿ ಮಾಡದಿದ್ದರೆ ರಾಜಕೀಯ ತ್ಯಾಗ ಮಾಡಲು ಸಿದ್ಧ: ತಮ್ಮದೇ ಸರ್ಕಾರದ ವಿರುದ್ಧ ಗುಡುಗಿದ ಸಿಎಸ್ ನಾಡಗೌಡ
ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಬಿಜೆಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಸಿ.ಎಸ್.ನಾಡಗೌಡ, ಸರ್ಕಾರ ನಿರೀಕ್ಷೆ ಮಾಡಿದ ಮಟ್ಟದಲ್ಲಿ ರಾಜ್ಯ ಅಭಿವೃದ್ಧಿ ಮಾಡಬೇಕು. ಅಭಿವೃದ್ಧಿ ಮಾಡದಿದ್ದರೆ ರಾಜಕಾರಣ ಮಾಡುವ ಇಚ್ಛೆ ನನಗೆ ಇಲ್ಲ. ಆ ಮೂಲಕ ಅಭಿವೃದ್ಧಿ ಅನುದಾನ ನೆಪದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ.
ವಿಜಯಪುರ, ಜೂನ್ 13: ರಾಜ್ಯ ಸರ್ಕಾರ ಹಿಂದುಳಿದ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಬೇಕು. ಇಲ್ಲವಾದರೆ ರಾಜಕೀಯ ತ್ಯಾಗ ಮಾಡಲು ಸಿದ್ಧ ಎಂದು ಕಾಂಗ್ರೆಸ್ (Congress) ಶಾಸಕ ಸಿ.ಎಸ್.ನಾಡಗೌಡ (CS Nadagouda) ಹೇಳಿದ್ದಾರೆ. ಜಿಲ್ಲೆಯ ಮುದ್ದೇಬಿಹಾಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ನಿರೀಕ್ಷೆ ಮಾಡಿದ ಮಟ್ಟದಲ್ಲಿ ರಾಜ್ಯ ಅಭಿವೃದ್ಧಿ ಮಾಡಬೇಕು. ಒಂದು ವೇಳೆ ಅಭಿವೃದ್ಧಿ ಮಾಡದಿದ್ದರೆ ರಾಜಕಾರಣ ಮಾಡುವ ಇಚ್ಛೆ ನನಗೆ ಇಲ್ಲ. ನಮ್ಮದೇ ಸರ್ಕಾರ ಇದ್ದರೂ ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡಿಲ್ಲ. ಕೆಲ ಕ್ಷೇತ್ರಗಳಿಗೆ ಮಾತ್ರ ಅನುದಾನ ನೀಡಿದ್ದಾರೆ ಎಂದು ಹೇಳಿದ್ದಾರೆ. ಒಂದು ಕ್ಷೇತ್ರಕ್ಕೆ ಅತೀ ಹೆಚ್ಚು ಹಣ ಕೊಟ್ಟು ಆತ ಭಾರೀ ಕೆಲಸ ಮಾಡಿದ ಎನ್ನುವುದು, ಬೇರೆಯವರು ಕೇಳಿದಾಗ ಹಣ ಕೊಡದೇ ಇರೋದು. ಅದನ್ನು ಸಫರ್ ಮಾಡುವಂತ ಅಭಿವೃದ್ಧಿಯಿಂದ ಕ್ಷೇತ್ರದ ಜನರನ್ನು ವಂಚಿತ ಮಾಡುವಂತ ರಾಜಕೀಯ ಮಾಡುವ ಇಚ್ಚೇ ನನಗಿಲ್ಲ. ಆ ಮೂಲಕ ಸಿಎಂ ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿಗೆ ಹಣ ನೀಡಿಲ್ಲ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.