ಮೈತ್ರಿಯಿಂದ ಲೋಕಸಭಾಯಲ್ಲಿ ಹೆಚ್ಚಿನ ಸ್ಥಾನ- CT ರವಿ
ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ ಮಾಜಿ ಸಚಿವ ಸಿ.ಟಿ.ರವಿ, ‘ರಾಜ್ಯದಿಂದ ಐವರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ. ಅದರಲ್ಲೂ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುವುದು ನಮ್ಮ ರಾಜ್ಯಕ್ಕೆ ಒಂದು ಗೌರವವಿದ್ದಂತೆ. ಹಾಗಾಗಿ ಸಿಕ್ಕಿರುವ ಎಲ್ಲಾರಿಗೂ ನಾನು ಶುಭ ಹಾರೈಸುತ್ತೇನೆ. ನಿಮ್ಮಿಂದ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದರು.
ನವದೆಹಲಿ, ಜೂ.09: ನರೇಂದ್ರ ಮೋದಿ(Narendra Modi) ಅವರು ಇಂದು(ಜೂ.09) ಮೂರನೇ ಬಾರಿಗೆ ಪ್ರಧಾನಿಯಾಗಿ ರಾಷ್ಟ್ರಪತಿ ಭವನದಲ್ಲಿ ಸಂಜೆ 7:15 ರ ಸುಮಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ವೇಳೆ ಕೆಲ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಈ ಕುರಿತು ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ ಮಾಜಿ ಸಚಿವ ಸಿ.ಟಿ.ರವಿ, ‘ರಾಜ್ಯದಿಂದ ಐವರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ. ಅದರಲ್ಲೂ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುವುದು ನಮ್ಮ ರಾಜ್ಯಕ್ಕೆ ಒಂದು ಗೌರವವಿದ್ದಂತೆ. ಹಾಗಾಗಿ ಸಿಕ್ಕಿರುವ ಎಲ್ಲಾರಿಗೂ ನಾನು ಶುಭ ಹಾರೈಸುತ್ತೇನೆ. ನಿಮ್ಮಿಂದ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದರು. ಜೊತೆಗೆ ಮೈತ್ರಿಯಿಂದ ಲೋಕಸಭಾಯಲ್ಲಿ ಹೆಚ್ಚಿನ ಸ್ಥಾನ ಬಂದಿದೆ. ಆದರೆ, ಇದಕ್ಕೆ ಮೈತ್ರಿ ಒಂದೇ ಕಾರಣವಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 09, 2024 04:20 PM
Latest Videos