‘ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು’: ಹಂಸಲೇಖ ಬಗ್ಗೆ ಡಾಲಿ ಧನಂಜಯ ಮಾತು

| Updated By: ಮದನ್​ ಕುಮಾರ್​

Updated on: Apr 07, 2022 | 9:55 AM

‘ನಾದಬ್ರಹ್ಮ’ ಹಂಸಲೇಖ ಅವರ ಬಗ್ಗೆ ಡಾಲಿ ಧನಂಜಯ ಅವರು ಮಾತನಾಡಿದ್ದಾರೆ. ‘ಸಿಂಹ ಆಡಿಯೋ’ ಲೋಗೋ ಲಾಂಚ್​ ವೇದಿಕೆಯಲ್ಲಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟರಾದ ಡಾಲಿ ಧನಂಜಯ (Daali Dhananjay) ಮತ್ತು ವಸಿಷ್ಠ ಸಿಂಹ ಅವರ ನಡುವೆ ಉತ್ತಮ ಗೆಳೆತನ ಇದೆ. ಹಲವು ವರ್ಷಗಳಿಂದ ಅವರು ಸ್ನೇಹಿತರು. ‘ಟಗರು’ ಸಿನಿಮಾದಲ್ಲಿ ಅವರಿಬ್ಬರು ಮಾಡಿದ ಡಾಲಿ ಮತ್ತು ಚಿಟ್ಟೆ ಎಂಬ ಪಾತ್ರಗಳು ಸಖತ್​ ಫೇಮಸ್​ ಆದವು. ಈಗ ವಸಿಷ್ಠ ಸಿಂಹ (Vasishta N Simha) ಅವರು ಹೊಸ ಆಡಿಯೋ ಕಂಪನಿ ಶುರು ಮಾಡಿದ್ದಾರೆ. ಇತ್ತೀಚೆಗೆ ಅದರ ಲೋಗೋ ಲಾಂಚ್​ ಮಾಡಲಾಯಿತು. ಗೆಳೆಯನ ಹೊಸ ಕಾರ್ಯಕ್ಕೆ ಶುಭ ಹಾರೈಸಲು ಧನಂಜಯ ಬಂದಿದ್ದರು. ಆ ಕಾರ್ಯಕ್ರಮಕ್ಕೆ ‘ನಾದ ಬ್ರಹ್ಮ’ ಹಂಸಲೇಖ (Nada Brahma Hamsalekha) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಹಂಸಲೇಖ ಬಗ್ಗೆ ಧನಂಜಯ ಅವರು ಮನಸಾರೆ ಮಾತನಾಡಿದರು. ‘ನಾನು ಕೂಡ ನಿಮ್ಮ ಶಿಷ್ಯ. ನಿಮ್ಮ ಹಾಡುಗಳನ್ನು ಕೇಳಿ, ಅದರಲ್ಲಿನ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮನುಷ್ಯರಾಗುವ ಸಾಧ್ಯತೆ ಇದೆ. ಆ ರೀತಿ ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು’ ಎಂದು ಹೇಳಿದರು ಡಾಲಿ ಧನಂಜಯ.

ಇದನ್ನೂ ಓದಿ:

ಡಾಲಿ ಧನಂಜಯ ಜತೆ ನಟಿಸಿದ್ದ ಸಂಗೀತಾ ಭಟ್ ಚಿತ್ರರಂಗಕ್ಕೆ ಕಂಬ್ಯಾಕ್

ಅಮೃತಾ ಅಯ್ಯಂಗಾರ್​ಗೆ ಡಾಲಿ ಧನಂಜಯ ಪ್ರಪೋಸ್​; ಖುಷಿಯಿಂದ ಕಮೆಂಟ್​​ ಮಾಡಿದ ಫ್ಯಾನ್ಸ್​

Published on: Apr 07, 2022 09:53 AM