ಚಿತ್ರದುರ್ಗದಲ್ಲಿ ಡಾಲಿ ಧನಂಜಯ ನೋಡಲು ಜನಸಾಗರ; ಲಾಠಿ ಬೀಸಿದ ಪೊಲೀಸರು
ನಟ ಡಾಲಿ ಧನಂಜಯ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಅಭಿಮಾನಿಗಳು ಡಾಲಿ ಅವರನ್ನು ಇಷ್ಟಪಡುತ್ತಾರೆ. ಧನಂಜಯ ಅವರು ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಅವರ ಜೊತೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ವಿಡಿಯೋ ಇಲ್ಲಿದೆ..
ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ನಡೆಯಿತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ನಟ ಡಾಲಿ ಧನಂಜಯ ಅವರು ಬಂದಿದ್ದಾರೆ. ಈ ವೇಳೆ ಧನಂಜಯ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದಾರೆ. ಡಾಲಿ ಜೊತೆ ಸೆಲ್ಫಿ ಬೇಕು ಎಂದು ಫ್ಯಾನ್ಸ್ ಮುಗಿ ಬಿದ್ದಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸುವುದು ಅನಿವಾರ್ಯ ಆಯಿತು. ಶೀಘ್ರದಲ್ಲೇ ಡಾಲಿ ಧನಂಜಯ ಅವರ ಮದುವೆ ನೆರವೇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.