Loading video

ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ

|

Updated on: Jan 27, 2025 | 2:37 PM

ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಕ್ಯಾನ್ಸರ್​ನಿಂದ ಗುಣಮುಖರಾಗಿ ಬಂದಿರುವ ಶಿವರಾಜ್​ಕುಮಾರ್​ ಅವರನ್ನು ಅನೇಕ ಸೆಲೆಬ್ರಿಟಿಗಳು ಭೇಟಿ ಆಗುತ್ತಿದ್ದಾರೆ. ಇಂದು (ಜ.27) ಡಾಲಿ ಧನಂಜಯ ಅವರು ಶಿವಣ್ಣನ ಭೇಟಿ ಮಾಡಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿ ಖುಷಿಯ ಸುದ್ದಿ ಹಂಚಿಕೊಂಡರು. ಶಿವಣ್ಣ ನಮಗೆಲ್ಲ ಮಾದರಿ ಎಂದು ಡಾಲಿ ಹೇಳಿದ್ದಾರೆ.

ಶಿವರಾಜ್​ಕುಮಾರ್​ ಅವರು ಕ್ಯಾನ್ಸರ್​ನಿಂದ ಗುಣಮುಖರಾಗಿದ್ದಾರೆ. ಅವರನ್ನು ಭೇಟಿ ಮಾಡಿದ ಡಾಲಿ ಧನಂಜಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಶಿವಣ್ಣ ಅವರನ್ನು ನೋಡಿ ಬಹಳ ಖುಷಿ ಆಯಿತು. ಈಗ ಆರಾಮಾಗಿದ್ದಾರೆ. ಇನ್ನು ಎರಡು ಅಥವಾ ಮೂರು ವಾರದಲ್ಲಿ ಅವರು ಶೂಟಿಂಗ್ ಕೂಡ ಮಾಡಬಹುದು. ಅಂಥ ಪರಿಸ್ಥಿತಿಯನ್ನು ಅವರು ಗೆದ್ದು ಬಂದಿದ್ದಾರೆ. ಯಾರ ಮುಂದೆಯೂ ಅವರು ಕುಗ್ಗಲಿಲ್ಲ. ಇನ್ನೂ ಗಟ್ಟಿಯಾಗಿ ವಾಪಸ್ ಬಂದಿದ್ದಾರೆ’ ಎಂದು ಡಾಲಿ ಧನಂಜಯ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.