ಪ್ರತಿ ದಿನ ನಿದ್ರೆಯಿಂದ ಏಳುವಾಗ ಏನು ಮಾಡಬೇಕು? ಶಾಸ್ತ್ರಗಳಲ್ಲಿ ಉಲ್ಲೇಖಿಸಿದ ಮಾಹಿತಿ ಇಲ್ಲಿದೆ
ಬೆಳಗಿನ ಜೀವನಕ್ರಮದ ಆಧ್ಯಾತ್ಮಿಕ ಅಂಶಗಳನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ. ಪ್ರಾಚೀನ ಪದ್ಧತಿಗಳ ಪ್ರಕಾರ, ಬ್ರಾಹ್ಮಿ ಮುಹೂರ್ತದಲ್ಲಿ (ಸೂರ್ಯೋದಯಕ್ಕೂ ಮುಂಚೆ) ಎದ್ದೇಳುವುದರ ಮಹತ್ವವನ್ನು ವಿವರಿಸಲಾಗಿದೆ. ಈ ಸಮಯದಲ್ಲಿ ಎದ್ದೇಳುವುದರಿಂದ ಮನಸ್ಸು ಚುರುಕಾಗಿರುತ್ತದೆ ಮತ್ತು ದಿನವಿಡೀ ಚೈತನ್ಯ ಇರುತ್ತದೆ ಎಂದು ಹೇಳಲಾಗುತ್ತದೆ. ಋಣಾತ್ಮಕ ಶಕ್ತಿಗಳನ್ನು ದೂರವಿಡಲು ಮತ್ತು ದೇಹಕ್ಕೆ ಧನಾತ್ಮಕ ಶಕ್ತಿಯನ್ನು ತುಂಬಲು ಇದು ಸಹಾಯ ಮಾಡುತ್ತದೆ.
ಪ್ರತಿ ದಿನವೂ ಬೆಳಗ್ಗಿನ ಜಾವ ನಾವು ಎದ್ದ ತಕ್ಷಣ ‘‘ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನಂ ಪುನರಪಿ ಮರಣಂ’’. ಹೀಗಾಗಿ ನಾವು ಮತ್ತೆ ಒಂದು ದಿನ ನಮಗೆ ಭಗವಂತ ಕೊಟ್ಟ ಹೊಸ ದಿವಸ ನಾವು ಜನನವಾದಂತೆಯೇ ಅರ್ಥ. ಸೂರ್ಯೋದಯಕ್ಕೆ ನಾವು ಎದ್ದಾಗ ಜನನ. ಆದರೆ ಹಾಗೆ ಎದ್ದಾಗ ನಾವು ಏನು ಮಾಡಬೇಕು? ಪ್ರತಿ ದಿನ ನಾವು ನಿದ್ರೆಯಿಂದ ಏಳುವಾಗ ಏನು ಮಾಡಬೇಕು? ಸಾಮಾನ್ಯವಾಗಿ ಒಂದು ಶ್ಲೋಕ ಹೇಳಿಕೊಳ್ಳುತ್ತೇವಿ. ಆ ಶ್ಲೋಕವನ್ನು ಹೇಳಿ ಎರಡು ಕೈಯನ್ನು ನೋಡಿ ಬೆಳಗ್ಗಿನ ಜಾವ ಕೆಲಸ ಕಾರ್ಯಗಳಲ್ಲಿ ಮಗ್ನರಾಗುತ್ತೇವೆ. ಆದರೆ ಶಾಸ್ತ್ರಗಳಲ್ಲಿ ಏನು ಹೇಳುತ್ತೆ? ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
Latest Videos