Daily Devotional: ಮದುವೆ, ಶುಭ ಸಮಾರಂಭಗಳಲ್ಲಿ ಮುಯ್ಯಿ ಕೊಡಬೇಕು ಗೊತ್ತಾ?

Updated on: Mar 16, 2026 | 7:13 AM

ಮುಯ್ಯಿ ಎಂದರೆ ಪ್ರೀತಿಪೂರ್ವಕವಾಗಿ, ಮನಸ್ಸಿನ ಒಳ್ಳೆಯ ಭಾವನೆಯಿಂದ ನೀಡುವ ಹಣ ಅಥವಾ ವಸ್ತುವಾಗಿದೆ. ಮುಯ್ಯಿ ನೀಡುವಾಗ ಹಣಕ್ಕೆ "ಒಂದು" ರೂಪಾಯಿ ಸೇರಿಸುವ ರೂಢಿ ಇದೆ (ಉದಾಹರಣೆಗೆ 101, 501). ಸೊನ್ನೆಯು ಪರಿಪೂರ್ಣತೆಯ ಸಂಕೇತವಲ್ಲ, ಬದಲಿಗೆ "ಒಂದು" ಅಭಿವೃದ್ಧಿ, ಪ್ರಾರಂಭ ಮತ್ತು ಸೂರ್ಯನ ಸಂಕೇತವಾಗಿದೆ. ಇದು "ನೂರು ಮುಗಿಸಿ ಒಂದಕ್ಕೆ ಹೋಗುತ್ತಿದ್ದೀರಿ, ನಿಮಗೆ ಶುಭವಾಗಲಿ" ಎಂಬ ಆಶಯವನ್ನು ಸೂಚಿಸುತ್ತದೆ. ಹೀಗೆ ಮುಯ್ಯಿಯು ಬಾಂಧವ್ಯಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ಆರ್ಥಿಕ ನೆರವನ್ನು ಒದಗಿಸುತ್ತದೆ. ಸಂಪತ್ತಿದ್ದರೂ, ಇದು ಆಶೀರ್ವಾದದ ರೂಪದಲ್ಲಿ ನೀಡಲಾಗುತ್ತದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮದುವೆ, ಶುಭ ಸಮಾರಂಭಗಳಲ್ಲಿ ಮುಯ್ಯಿ ಕೊಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸನಾತನ ಸಂಪ್ರದಾಯದಲ್ಲಿ ವಿವಾಹ, ನಾಮಕರಣ ಅಥವಾ ಗೃಹಪ್ರವೇಶದಂತಹ ಶುಭ ಸಮಾರಂಭಗಳಿಗೆ ಹೋಗುವಾಗ ಮುಯ್ಯಿ ನೀಡುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಇದು ಕೇವಲ ಒಂದು ಕಾಣಿಕೆಯಾಗದೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.

ಮುಯ್ಯಿ ಎಂದರೆ ಪ್ರೀತಿಪೂರ್ವಕವಾಗಿ, ಮನಸ್ಸಿನ ಒಳ್ಳೆಯ ಭಾವನೆಯಿಂದ ನೀಡುವ ಹಣ ಅಥವಾ ವಸ್ತುವಾಗಿದೆ. ಮುಯ್ಯಿ ನೀಡುವಾಗ ಹಣಕ್ಕೆ “ಒಂದು” ರೂಪಾಯಿ ಸೇರಿಸುವ ರೂಢಿ ಇದೆ (ಉದಾಹರಣೆಗೆ 101, 501). ಸೊನ್ನೆಯು ಪರಿಪೂರ್ಣತೆಯ ಸಂಕೇತವಲ್ಲ, ಬದಲಿಗೆ “ಒಂದು” ಅಭಿವೃದ್ಧಿ, ಪ್ರಾರಂಭ ಮತ್ತು ಸೂರ್ಯನ ಸಂಕೇತವಾಗಿದೆ. ಇದು “ನೂರು ಮುಗಿಸಿ ಒಂದಕ್ಕೆ ಹೋಗುತ್ತಿದ್ದೀರಿ, ನಿಮಗೆ ಶುಭವಾಗಲಿ” ಎಂಬ ಆಶಯವನ್ನು ಸೂಚಿಸುತ್ತದೆ. ಹೀಗೆ ಮುಯ್ಯಿಯು ಬಾಂಧವ್ಯಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ಆರ್ಥಿಕ ನೆರವನ್ನು ಒದಗಿಸುತ್ತದೆ. ಸಂಪತ್ತಿದ್ದರೂ, ಇದು ಆಶೀರ್ವಾದದ ರೂಪದಲ್ಲಿ ನೀಡಲಾಗುತ್ತದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Follow Us