Daily Devotional: ಬಲಗೈಯಿಂದಲೇ ಆಶೀರ್ವಾದ ಮಾಡುವುದು ಯಾಕೆ ಗೊತ್ತಾ?

Updated on: Feb 27, 2026 | 7:37 AM

ಬಲಗೈಗೆ ಹೆಚ್ಚಿನ ಪ್ರಾಶಸ್ತ್ಯವಿದ್ದು, ಊಟ ಮಾಡುವುದು, ವಿಭೂತಿ ಅಥವಾ ಕುಂಕುಮ ಧರಿಸುವುದು, ಆರತಿ ಮಾಡುವುದು ಮುಂತಾದ ಕ್ರಿಯೆಗಳಿಗೆ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆಶೀರ್ವಾದ ನೀಡುವಾಗ ಬಲಗೈಯ ಬಳಕೆಯು ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸುತ್ತದೆ. ನಮ್ಮ ದೇಹದ ಪಿಂಗಳ ನಾಡಿ ಬಲಭಾಗಕ್ಕೆ ಸಂಬಂಧಿಸಿದ್ದು, ಮೆದುಳಿನ ಎಡಭಾಗವು ದೇಹದ ಬಲಭಾಗವನ್ನು ನಿಯಂತ್ರಿಸುತ್ತದೆ. ಬಲಗೈಯಿಂದ ಮಾಡಿದ ಆಶೀರ್ವಾದವು ಶಕ್ತಿ, ಸೌರಾಂಶವನ್ನು ನೀಡಿ, ಎಲ್ಲಾ ರೀತಿಯಲ್ಲೂ ಶುಭಕರವಾಗಿರುತ್ತದೆ ಎಂದು ನಂಬಲಾಗಿದೆ. ಎರಡು ಕೈಗಳನ್ನು ಹೊಂದಿಲ್ಲದಿದ್ದಾಗ ಎಡಗೈಯಿಂದ ಆಶೀರ್ವಾದ ಮಾಡಿದರೂ, ಬಲಗೈಯ ಫಲವೇ ಲಭಿಸುತ್ತದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

ಬೆಂಗಳೂರು, ಫೆಬ್ರವರಿ​ 27: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿಬಲಗೈಯಿಂದ್ಲೇ ಆಶೀರ್ವಾದ ಮಾಡುವುದು ಯಾಕೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ ಗುರುಗಳು, ಹಿರಿಯರು ಮತ್ತು ಮಠಾಧೀಶರು ನಮಸ್ಕಾರ ಮಾಡಿದಾಗ ಆಶೀರ್ವಾದ ನೀಡುವುದು ಒಂದು ಪದ್ಧತಿಯಾಗಿದೆ. ಈ ಆಶೀರ್ವಾದವನ್ನು ಸಾಮಾನ್ಯವಾಗಿ ಬಲಗೈಯಿಂದಲೇ ನೀಡಲಾಗುತ್ತದೆ. ದೇಹವನ್ನು ಎರಡು ಭಾಗಗಳಾಗಿ ವಿಂಗಡಿಸಿದಾಗ, ಬಲಭಾಗವನ್ನು ಸೂರ್ಯ ಭಾಗ ಮತ್ತು ಎಡಭಾಗವನ್ನು ಚಂದ್ರ ಭಾಗ ಅಥವಾ ವಾಮ ಭಾಗ ಎಂದು ಕರೆಯಲಾಗುತ್ತದೆ.

Follow Us