Loading video

Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?

Updated on: Jun 13, 2025 | 6:56 AM

ಡಾ. ಬಸವರಾಜ್ ಗುರೂಜಿ ಅವರ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಅಕ್ಷತೆಯ ಮಹತ್ವವನ್ನು ವಿವರಿಸಲಾಗಿದೆ. ಅಕ್ಷತೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗಿದೆ. ಪ್ರತಿ ಮನೆಯಲ್ಲೂ ಅಕ್ಷತೆಯನ್ನು ಇಡುವುದು ಶುಭಕರ ಎಂದು ಹೇಳಲಾಗುತ್ತದೆ. ವಿಡಿಯೋ ನೋಡಿ.

ಬೆಂಗಳೂರು, ಜೂನ್​ 13: ಅಕ್ಷತೆ ಕೇವಲ ಶುಭಕಾರ್ಯಗಳಲ್ಲಿ ಬಳಸುವ ವಸ್ತುವಲ್ಲ. ಮನೆಯಲ್ಲಿ ಅಕ್ಷತೆಯನ್ನು ಇಟ್ಟುಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಅಕ್ಷತೆ ಮಾನಸಿಕ ಶಾಂತಿಯನ್ನು ನೀಡುತ್ತದೆ, ಸಮೃದ್ಧಿಯನ್ನು ಆಕರ್ಷಿಸುತ್ತದೆ ಮತ್ತು ಕಷ್ಟಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆಯಿದೆ. ಪ್ರಯಾಣದ ಸಮಯದಲ್ಲಿ, ಪರೀಕ್ಷೆಗಳ ಸಮಯದಲ್ಲಿ ಮತ್ತು ರೋಗಿಗಳಿಗೆ ಅಕ್ಷತೆಯನ್ನು ಬಳಸುವುದು ಸಹ ಒಳ್ಳೆಯದು ಎಂದು ತಿಳಿಸಲಾಗಿದೆ.

Published on: Jun 13, 2025 06:55 AM