Daily Devotional: ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಸಾಮಾನ್ಯವಾಗಿ ಊಟ ಮಾಡುವಾಗ ಮಾತನಾಡಬಾರದು ಎಂದು ಹಿರಿಯರು ಹೇಳುತ್ತಾರೆ. ಹಿಂದೂ ಶಾಸ್ತ್ರಗಳಲ್ಲಿಯೂ ಇದರ ಉಲ್ಲೇಖವಿದೆ. ಇದಕ್ಕಿರುವ ಅಧ್ಯಾತ್ಮಿಕ ಹಿನ್ನೆಲೆ ಏನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಎಳೆಎಳೆಯಾಗಿ ವಿವರಿಸಿದ್ದಾರೆ. ವಿಡಿಯೋ ಇಲ್ಲಿದೆ.
ಊಟ ಮಾಡುವುದಕ್ಕೆ, ಅದರಲ್ಲಿಯೂ ಅನ್ನಕ್ಕೆ ಹಿಂದೂ ಸಂಸ್ಕೃತಿಯಲ್ಲಿ ಬಹಳ ಮಹತ್ವ ಇದೆ. ಅದೇ ರೀತಿ ಮಾತನಾಡುವುದು ಕೂಡ ಮನುಷ್ಯನಾದವನಿಗೆ ಬಹಳ ಮಹತ್ವದ್ದು. ವಿದ್ಯಾಭ್ಯಾಸದಿಂದ, ಜ್ಞಾನದಿಂದ, ಹಿರಿಯರ ಕೃಪೆಯಿಂದ ಮಾತು ಬರುತ್ತದೆ. ಆದರೆ ಎಲ್ಲಿ, ಯಾವಾಗ, ಹೇಗೆ ಮಾತನಾಡಬೇಕು ಎಂಬ ಜ್ಞಾನ ಅಗತ್ಯ. ಬಹುಮುಖ್ಯವಾಗಿ ಭೋಜನ ಕಾಲದಲ್ಲಿ ಮಾತನಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಊಟ ಮಾಡುವಾಗ ಮಾತನಾಡುವುದು ನಮಗೂ, ನಮ್ಮ ದೇಹಕ್ಕೂ ಅಷ್ಟು ಒಳ್ಳೆಯದಲ್ಲ. ಊಟ ಮಾಡುವುದನ್ನು ಅನ್ನ ಯಜ್ಞ ಎಂದು ಭಾವಿಸುತ್ತೇವೆ. ಹೀಗಾಗಿ ಭೋಜನ ಮಾಡುವ ಸಂದರ್ಭದಲ್ಲಿ ಮಾತನಾಡಿದರೆ ಆಯಸ್ಸು ಕಡಿಮೆ ಆಗುತ್ತದೆ. ಇಷ್ಟೇ ಅಲ್ಲದೆ ಇನ್ನೂ ಅನೇಕ ಫಲಾಫಲಗಳಿವೆ. ಹಾಗಾದರೆ, ಊಟ ಮಾಡುವಾಗ ಯಾಕೆ ಮಾತನಾಡಬಾರದು? ಇದಕ್ಕೆ ಇರುವ ಹಿನ್ನೆಲೆ ಏನು? ಹಿರಿಯರು ಯಾಕೆ ಹಾಗೆ ಹೇಳಿದ್ದಾರೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ತಿಳಿಸಿಕೊಟ್ಟಿದ್ದಾರೆ. ಅದೇನೆಂಬುದನ್ನು ವಿಡಿಯೋದಲ್ಲಿ ನೋಡಿ.
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್

