ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ

ರವಿ ಹೆಚ್ ಮೂಕಿ, ಕಲಘಟಗಿ
| Updated By: ಸುಷ್ಮಾ ಚಕ್ರೆ

Updated on: Nov 27, 2024 | 9:37 PM

ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಹೋರಾಟ‌ ನಡೆಸಲಾಗಿದೆ. ಇಂದು ಎಂಟನೇ ದಿನಕ್ಕೆ ಹೋರಾಟ ತಲುಪಿದೆ. ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ರಸ್ತೆ ಮೇಲೆ ಅಡುಗೆ ಮಾಡಿ ಊಟ ಮಾಡುವ ಮೂಲಕ ಧರಣಿ ನಡೆಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಗಿದೆ.

ಬಾಗಲಕೋಟೆ: ನೇಕಾರರಿಗೆ ನಿವೇಶನ, ನೂರಾರು ಜನ ನೇಕಾರರಿಗೆ ಸಿಟಿಎಸ್ ಪಹಣಿ, 55 ವರ್ಷ ಮೇಲ್ಪಟ್ಟ ನೇಕಾರರಿಗೆ 5 ಸಾವಿರ ಮಾಸಾಶನ ನೀಡಲಾಗಿದೆ. ಕೆಹೆಚ್​ಡಿಸಿಯಲ್ಲಿ ನಡೆದ ಅವ್ಯವಹಾರದ ಸಮಗ್ರ ತನಿಖೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ‌‌ ಮಾಡಲಾಗಿದೆ. ರಬಕವಿಬನಹಟ್ಟಿ ನಗರದ ಬಾಂಗಿ ಸರ್ಕಲ್ ನಲ್ಲಿ ನೇಕಾರರ ಪ್ರತಿಭಟನೆ ನಡೆಸಲಾಗಿದೆ.

ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಹೋರಾಟ‌ ನಡೆಸಲಾಗಿದೆ. ಇಂದು ಎಂಟನೇ ದಿನಕ್ಕೆ ಹೋರಾಟ ತಲುಪಿದೆ. ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ರಸ್ತೆ ಮೇಲೆ ಅಡುಗೆ ಮಾಡಿ ಊಟ ಮಾಡುವ ಮೂಲಕ ಧರಣಿ ನಡೆಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ