Horoscope Today 21 February​: ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ

Updated on: Feb 21, 2026 | 7:13 AM

ಇಂದು ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡಲಿದ್ದು, ರೇವತಿ ನಕ್ಷತ್ರದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಇರುತ್ತದೆ. ಈ ದಿನ ವಿನಾಯಕಿ ಚತುರ್ಥಿ, ಉಜ್ಜಯಿನಿಯಲ್ಲಿ ಮರುಳಾರಾಧ್ಯರ ಪುಣ್ಯ ದಿನ ಮತ್ತು ಅಂತರಾಷ್ಟ್ರೀಯ ಮಾತೃಭಾಷಾ ದಿನವೂ ಆಗಿದೆ. ಪ್ರತಿ ರಾಶಿಯವರಿಗೂ ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕೌಟುಂಬಿಕ ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಗ್ರಹಗಳ ಶುಭ ಫಲಗಳ ಬಗ್ಗೆ ವಿವರಿಸಲಾಗಿದೆ. ಕೆಲ ರಾಶಿಗಳಿಗೆ ಆರ್ಥಿಕ ಪ್ರಗತಿ, ಹೊಸ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆಗಳಿದ್ದರೆ, ಇನ್ನು ಕೆಲ ರಾಶಿಗಳವರು ಆರೋಗ್ಯದ ಬಗ್ಗೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 21, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ಚೌತಿ ತಿಥಿ, ರೇವತಿ ನಕ್ಷತ್ರ, ಶುಭ ಯೋಗ ಮತ್ತು ಭದ್ರ ಕರಣ ಈ ದಿನದ ವೈಶಿಷ್ಟ್ಯಗಳಾಗಿವೆ.