Horoscope Today 21 January: ಇಂದು ಈ ರಾಶಿಯವರ ವೈವಾಹಿಕ ಜೀವನದಲ್ಲಿ ಅಸ್ಥಿರತೆ!

Horoscope Today 21 January: ಇಂದು ಈ ರಾಶಿಯವರ ವೈವಾಹಿಕ ಜೀವನದಲ್ಲಿ ಅಸ್ಥಿರತೆ!

Updated on: Jan 21, 2026 | 6:52 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 21 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಬುಧವಾರ, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಶುಕ್ಲಪಕ್ಷದ ತದಿಗೆ ತಿಥಿ, ಧನಿಷ್ಠ ನಕ್ಷತ್ರ, ವ್ಯತಿಪಾತ ಯೋಗ ಮತ್ತು ತೈತಿಲಕರಣ ಇರುತ್ತದೆ. ರಾಹುಕಾಲವು ಮಧ್ಯಾಹ್ನ 12:30 ರಿಂದ 1:56 ರ ತನಕ ಇರಲಿದೆ. ಸಂಕಲ್ಪಕಾಲ ಅಥವಾ ಶುಭಕಾಲವು ಬೆಳಗ್ಗೆ 11:04 ರಿಂದ 11:29 ರವರೆಗೆ ಇರುತ್ತದೆ.

ಇಂದು ರವಿ ಮಕರ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚರಿಸಲಿದ್ದಾರೆ. ಈ ದಿನವು ಶಿವಕುಮಾರ ಮಹಾಸ್ವಾಮಿಗಳ ಪುಣ್ಯಸ್ಮರಣೆಯ ದಿನವೂ ಆಗಿದೆ. ಮೌನ ಗೌರಿ ವ್ರತ ಆಚರಣೆ, ಉಜಿರೆ, ಗಂಗಾವತಿ, ವಿಟ್ಲದಲ್ಲಿ ರಥೋತ್ಸವಗಳು ಹಾಗೂ ಗುಂಡೂರಿನಲ್ಲಿ ಬಸವೇಶ್ವರ ರಥೋತ್ಸವ ನಡೆಯಲಿದೆ. ಈ ದಿನ ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಎಲ್ಲರಿಗೂ ಡಾ. ಬಸವರಾಜ ಗುರೂಜಿ ಶುಭ ಕೋರಿದ್ದಾರೆ. ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗೆ ಪ್ರತಿಯೊಂದು ರಾಶಿಯವರಿಗೆ ಆರ್ಥಿಕ ಸ್ಥಿತಿ, ಉದ್ಯೋಗ, ವೈಯಕ್ತಿಕ ಸಂಬಂಧಗಳು, ಅದೃಷ್ಟ ಸಂಖ್ಯೆಗಳು, ಶುಭ ಬಣ್ಣಗಳು ಮತ್ತು ಪಠಿಸಬೇಕಾದ ಮಂತ್ರಗಳ ಕುರಿತು ನಿರ್ದಿಷ್ಟ ಭವಿಷ್ಯವನ್ನು ನೀಡಿದ್ದಾರೆ

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಪತ್ರಿಕೋದ್ಯಮ ಇವರು ಇಷ್ಟಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್‌ನಲ್ಲಿ ವೃತ್ತಿ ಜೀವನ ಆರಂಭಿಸಿರುವ ಇವರು, ಸಂಸ್ಥೆಯಲ್ಲಿ ಒಂದು ವರ್ಷದ ವೃತ್ತಿ ಅನುಭವ ಹೊಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More