‘ದರ್ಶನ್ ನೋಡಬೇಕು’: ಚಿತ್ರದುರ್ಗದಿಂದ ಬಂದು ಜೈಲಿನ ಹೊರಗೆ ಕಾದ ಫ್ಯಾನ್ಸ್
ಜೈಲಿನಲ್ಲಿ ಇರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಕುಟುಂಬದವರಿಗೆ ಮತ್ತು ಆಪ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಅಭಿಮಾನಿಗಳನ್ನು ಜೈಲಿನ ಒಳಗೆ ಬಿಡುತ್ತಿಲ್ಲ. ಹಾಗಿದ್ದರೂ ಕೂಡ ಪ್ರತಿ ದಿನ ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ಕಾಯುತ್ತಿದ್ದಾರೆ. ಚಿತ್ರದುರ್ಗದಿಂದ ಬಂದ ಮಹಿಳಾಭಿಮಾನಿಯೊಬ್ಬರು ದರ್ಶನ್ ಭೇಟಿಗಾಗಿ ಕಾದಿದ್ದಾರೆ.
ರೇಣುಕಾ ಸ್ವಾಮಿಯ ಕೊಲೆಯ ಕೇಸ್ನಲ್ಲಿ ನಟ ದರ್ಶನ್ ಎ2 ಆಗಿದ್ದು, ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಅವರನ್ನು ನೋಡಲು ಚಿತ್ರದುರ್ಗದಿಂದ ಬಂದ ಕಾವ್ಯಾ ಎಂಬ ಎಂಬ ಅಭಿಮಾನಿಯು ಸ್ನೇಹಿತೆ ರಚ್ಚು ಜೊತೆ ಪರಪ್ಪನ ಅಗ್ರಹಾರ ಜೈಲಿನ ಎದುರು ಕಾದಿದ್ದಾರೆ. ಈ ವೇಳೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಡಿ ಬಾಸ್ ಅವರನ್ನು ನೋಡಲು ನಾನು ದಾವಣಗೆರೆಯಿಂದ ಬಂದಿದ್ದೇನೆ. ನಿನ್ನೆ ಕೂಡ ಬಂದಿದ್ದೆವು. ಪೊಲೀಸರು ಬಿಡಲಿಲ್ಲ. ಇಂದು ಸಹ ದರ್ಶನ್ ಅವರನ್ನು ನೋಡಲು ಪ್ರಯತ್ನ ಮಾಡುತ್ತಿದ್ದೇವೆ. ಅಭಿಮಾನಿಗಳನ್ನು ಒಳಗೆ ಬಿಡಲ್ಲ ಅಂತ ಪೊಲೀಸರು ಹೇಳ್ತಿದ್ದಾರೆ. ನಮಗೆ ತುಂಬ ಬೇಸರ ಆಗಿದೆ’ ಎಂದು ದರ್ಶನ್ ಅಭಿಮಾನಿ ಕಾವ್ಯಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us