ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ

| Updated By: ಮದನ್​ ಕುಮಾರ್​

Updated on: Jun 25, 2024 | 10:01 PM

ನಟ ದರ್ಶನ್​ ಈಗ ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇರುವ ಅವರನ್ನು ನೋಡಲು ಆಪ್ತರು ಮತ್ತು ಕುಟುಂಬದವರು ಮಾತ್ರವಲ್ಲದೇ ಅಭಿಮಾನಿಗಳು ಕೂಡ ಆಗಮಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಅವಕಾಶ ಸಿಗುತ್ತಿಲ್ಲ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಎ2 ಆಗಿದ್ದು, ತನಿಖೆ ನಡೆಯುತ್ತಿದೆ. ಪವಿತ್ರಾ ಗೌಡ ಎ1 ಆಗಿದ್ದು, ಅವರು ಕೂಡ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ (Darshan) ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಪರಪ್ಪನ ಅಗ್ರಹಾರ ಜೈಲಿನ ಬಳಿ ದರ್ಶನ್​ ಫ್ಯಾನ್ಸ್​ ಕಾಯುತ್ತಿದ್ದಾರೆ. ಭೇಟಿ ಆಗಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಈ ವೇಳೆ ಅನುಪಮಾ, ಪ್ರಶಾಂತ್​ ಎಂಬಿಬ್ಬರು ಅಭಿಮಾನಿಗಳು (Darshan Fans) ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನಮಗೆ ಒಂದು ವರ್ಷದ ಹಿಂದೆ ಸುಳ್ಳು ಎಫ್​ಐಆರ್​ನಿಂದ ತೊಂದರೆ ಆಗಿತ್ತು. ಆಗ ದರ್ಶನ್​ ಸರ್​ ಬ್ಯುಸಿ ಆಗಿದ್ದರೂ ಕೂಡ ರಾತ್ರಿ 11 ಗಂಟೆಗೆ ಕರೆ ಮಾಡಿ ವಿಚಾರಿಸಿದರು. ಸಹಾಯ ಬೇಕಾದರೆ ಮಾಡ್ತೀನಿ ಎಂದರು. ಈಗ ದರ್ಶನ್​ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದನ್ನು ಕೋರ್ಟ್​ ತೀರ್ಮಾನಿಸುತ್ತದೆ. ಆ ರೀತಿ ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಆ ಅಭಿಮಾನದಿಂದ ನಾವು ಬಂದಿದ್ದೇವೆ’ ಎಂದು ಅನುಪಮಾ ಹೇಳಿದ್ದಾರೆ. ‘ದರ್ಶನ್​ ಅವರು ಕರ್ನಾಟಕದ ಹೆಮ್ಮೆ. ಅವರ ಸಿನಿಮಾ ಗೆದ್ದಾಗ ಅವರ ಮನೆಗೆ ಹೋಗಿ ಭೇಟಿ ಆಗುವುದಷ್ಟೇ ಅಲ್ಲ. ಅವರು ಕಷ್ಟದಲ್ಲಿ ಇರುವಾಗ ಭೇಟಿ ಮಾಡಬೇಕು ಎನಿಸಿತು. ಹಾಗಾಗಿ ಬಂದಿದ್ದೇವೆ. ಆದರೆ ಭೇಟಿಗೆ ಅವಕಾಶ ಸಿಕ್ಕಿಲ್ಲ’ ಎಂದು ಪ್ರಶಾಂತ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.