ಊಟ, ನಿದ್ರೆ, ಕೆಲಸ ಬಿಟ್ಟು ದರ್ಶನ್​ಗಾಗಿ ಜೈಲಿನ ಹೊರಗೆ ಕಾದಿರುವ ಅಭಿಮಾನಿಗಳು

| Updated By: ಮದನ್​ ಕುಮಾರ್​

Updated on: Jun 23, 2024 | 6:32 PM

ಕೊಲೆ ಆರೋಪ ಹೊತ್ತಿರುವ ದರ್ಶನ್​, ಪವಿತ್ರಾ ಗೌಡ ಮುಂತಾದವರು ಜೈಲು ಸೇರಿದ್ದಾರೆ. ಅವರನ್ನು ನೋಡಲು ರಾಯಚೂರಿನಿಂದ ಕೆಲವು ಅಭಿಮಾನಿಗಳು ಬಂದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಹೊರಗೆ ನಿಂತು ಇವರೆಲ್ಲ ಕಾಯುತ್ತಿದ್ದಾರೆ. ದರ್ಶನ್​ರನ್ನು ನೋಡಬೇಕು ಎಂದು ಕೆಲಸ ಬಿಟ್ಟು, ಸರಿಯಾಗಿ ಊಟ, ನಿದ್ರೆ ಕೂಡ ಮಾಡದೇ ಫ್ಯಾನ್ಸ್​ ಕಾಯುತ್ತಿದ್ದಾರೆ.

ನಟ ದರ್ಶನ್​ (Darshan) ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಎಲ್ಲ ಊರುಗಳಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಪ್ರತಿ ವರ್ಷ ದರ್ಶನ್​ ಹುಟ್ಟುಹಬ್ಬದ ದಿನ ಅವರನ್ನು ನೋಡಲು ಬೇರೆ ಬೇರೆ ಊರುಗಳಿಂದ ಅಭಿಮಾನಿಗಳು ಬರುತ್ತಿದ್ದರು. ಆದರೆ ಈಗ ಅವರನ್ನು ನೋಡಲು ಅಭಿಮಾನಿಗಳು ದೂರದ ಊರುಗಳಿಂದ ಬಂದು ಜೈಲಿನ ಎದುರು ಕಾಯುವಂತಾಗಿದೆ. ರೇಣುಕಾ ಸ್ವಾಮಿ (Renuka Swamy) ಎಂಬಾತನ ಕೊಲೆ ಆರೋಪದಲ್ಲಿ ದರ್ಶನ್​ ಜೈಲು ಸೇರಿರುವುದು ಅಭಿಮಾನಿಗಳು ಹಾಗೂ ಆಪ್ತರಿಗೆ ನೋವುಂಟುಮಾಡಿದೆ. ರಾಯಚೂರಿನಿಂದ ಬಂದಿರುವ ಕೆಲವು ಅಭಿಮಾನಿಗಳು (Darshan Fans) ಪರಪ್ಪನ ಅಗ್ರಹಾರ ಜೈಲಿನ ಹೊರಗೆ ನಿಂತು ತಮ್ಮ ನೆಚ್ಚಿನ ನಟನಿಗಾಗಿ ಕಾಯುತ್ತಿದ್ದಾರೆ. ಕೆಲಸ ಬಿಟ್ಟು ಸರಿಯಾಗಿ ಊಟ, ನಿದ್ರೆಯೂ ಮಾಡದೇ ಜೈಲಿನ ಹೊರಗೆ ಕಾಯುತ್ತಿದ್ದಾರೆ. ‘ದರ್ಶನ್​ ಅವರನ್ನು ನೋಡಿಕೊಂಡೇ ಹೋಗುತ್ತೇವೆ’ ಎಂದು ಈ ಅಭಿಮಾನಿಗಳು ಪಟ್ಟು ಹಿಡಿದ್ದಿದ್ದಾರೆ. ದರ್ಶನ್​ ಜೊತೆ ಪವಿತ್ರಾ ಗೌಡ ಸೇರಿ ಅನೇಕರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on