ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

Updated By: ಮದನ್​ ಕುಮಾರ್​

Updated on: Dec 12, 2025 | 7:31 PM

‘ನಾವು ಅಂದುಕೊಂಡಿದ್ದಕ್ಕಿಂತ ಡಬಲ್ ಚೆನ್ನಾಗಿದೆ. ಈ ಸಿನಿಮಾ 100 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತದೆ. ಒಂದೊಂದು ದೃಶ್ಯ ಕೂಡ ರೋಚಕವಾಗಿ ಇದೆ. ಸಾರಥಿ ಸಿನಿಮಾದ ಇತಿಹಾಸ ರಿಪೀಟ್ ಆಗುತ್ತದೆ’ ಎಂದು ‘ದಿ ಡೆವಿಲ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಮೈಸೂರಿನಲ್ಲಿ ಹೇಳಿದ್ದಾರೆ.

ಮೈಸೂರಿನಲ್ಲಿ ‘ದಿ ಡೆವಿಲ್’ (The Devil) ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಅಭಿಮಾನಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಸಾಂಗ್ ಸೂಪರ್ ಆಗಿದೆ. ದರ್ಶನ್ (Darshan) ಚೆನ್ನಾಗಿ ನಟನೆ ಮಾಡಿದ್ದಾರೆ. ಕಥೆಯಲ್ಲಿ ಟ್ವಿಸ್ಟ್ ಚೆನ್ನಾಗಿದೆ. ಡೈಲಾಗ್, ಫೈಟ್ ಎಲ್ಲವೂ ಸಖತ್ ಆಗಿದೆ. ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಹಾಡು ಸೂಪರ್ ಆಗಿದೆ. ಇಂದಿನ ರಾಜಕೀಯದಲ್ಲಿ ಏನೆಲ್ಲ ನಡೆಯುತ್ತಿದೆ ಅದನ್ನೇ ಈ ಸಿನಿಮಾ ಮೂಲಕ ತೋರಿಸಿದ್ದಾರೆ. ನಾವು ಅಂದುಕೊಂಡಿದ್ದಕ್ಕಿಂತ ದುಪ್ಪಟ್ಟು ಚೆನ್ನಾಗಿದೆ. ಈ ಸಿನಿಮಾ 100 ದಿನ ಪ್ರದರ್ಶನ ಕಾಣುತ್ತದೆ. ಒಂದೊಂದು ದೃಶ್ಯ ಕೂಡ ರೋಚಕವಾಗಿದೆ. ಸಾರಥಿ ಸಿನಿಮಾದ ಇತಿಹಾಸ ರಿಪೀಟ್ ಆಗುತ್ತದೆ. ನಮ್ ಬಾಸ್ ಬಿಡುಗಡೆ ಆಗಬೇಕು’ ಎಂಬಿತ್ಯಾದಿ ಅನಿಸಿಕೆಗಳನ್ನು ದರ್ಶನ್ ಅಭಿಮಾನಿಗಳು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.