ಇಂದ್ರಜಿತ್ ಆರೋಪ ಕರ್ನಾಟಕಕ್ಕೆ ಮಾಡಿದ ಅವಮಾನ: ದರ್ಶನ್ ಹೀಗ್ಯಾಕಂದ್ರು?
[lazy-load-videos-and-sticky-control id=”ucpe_WPGvK0″] ದಾವಣಗೆರೆ: ಬೆಂಗಳೂರಿನಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣ ಸ್ಯಾಂಡಲ್ವುಡ್ ಬುಡವನ್ನೇ ಅಲುಗಾಡಿಸುತ್ತಿದೆ. ಹೀಗಾಗಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್ವುಡ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸತ್ತವರ ಹೆಸರು ಕೆಡಿಸುವುದು ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ? ದರ್ಶನ್ ಬೇಸರ: ಈ ವಿಚಾರ ಬರಿ ಸ್ಯಾಂಡಲ್ ವುಡ್‌ಗೆ ಮಾತ್ರ ಅಲ್ಲ, ಇಡೀ ಕರ್ನಾಟಕಕ್ಕೆ ಅವಮಾನ ಮಾಡಿರುವಂತಹ ಸಂಗತಿಯಾಗಿದೆ. ಹೀಗಾಗಿ ಡ್ರಗ್ಸ್ ಬಗ್ಗೆ ತನಿಖೆ ನಡೆಯುತ್ತಿದೆ. ಈ ತನಿಖೆಯಿಂದ, ದಂಧೆಯಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಲಿ […]
[lazy-load-videos-and-sticky-control id=”ucpe_WPGvK0″]
ದಾವಣಗೆರೆ: ಬೆಂಗಳೂರಿನಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣ ಸ್ಯಾಂಡಲ್ವುಡ್ ಬುಡವನ್ನೇ ಅಲುಗಾಡಿಸುತ್ತಿದೆ. ಹೀಗಾಗಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್ವುಡ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸತ್ತವರ ಹೆಸರು ಕೆಡಿಸುವುದು ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ? ದರ್ಶನ್ ಬೇಸರ: ಈ ವಿಚಾರ ಬರಿ ಸ್ಯಾಂಡಲ್ ವುಡ್‌ಗೆ ಮಾತ್ರ ಅಲ್ಲ, ಇಡೀ ಕರ್ನಾಟಕಕ್ಕೆ ಅವಮಾನ ಮಾಡಿರುವಂತಹ ಸಂಗತಿಯಾಗಿದೆ. ಹೀಗಾಗಿ ಡ್ರಗ್ಸ್ ಬಗ್ಗೆ ತನಿಖೆ ನಡೆಯುತ್ತಿದೆ. ಈ ತನಿಖೆಯಿಂದ, ದಂಧೆಯಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಲಿ ಎಂದಿದ್ದಾರೆ.
ಜೊತೆಗೆ ಚಿರಂಜೀವಿ ಸರ್ಜಾ ಅವರ ಮೇಲೆ ಬಂದಿರುವ ಆರೋಪಕ್ಕೆ ದರ್ಶನ್ ಭಾರಿ ಬೇಸರ ವ್ಯಕ್ತಪಡಿಸಿದ್ದು, ಸತ್ತವರ ಹೆಸರನ್ನು ಕೆಡಿಸುವುದು ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ ಎಂದಿದ್ದಾರೆ. ಒಂದು ಕ್ಲಾಸ್ ರೂಮಿನಲ್ಲಿ ರ್ಯಾಂಕ್ ಸ್ಟೂಡೆಂಟ್ ಇರುತ್ತಾನೆ ಹಾಗೂ ಜೀರೋ ಸ್ಟುಡೆಂಟ್ ಸಹ ಇರುತ್ತಾರೆ. ಅದರಿಂದ ಇಡೀ ಕ್ಲಾಸ್ ರೂಮನ್ನೇ ಜೀರೋ ಎನ್ನುವುದು ತಪ್ಪು ಎಂದಿದ್ದಾರೆ.
Published On - 12:49 pm, Mon, 31 August 20