ದರ್ಶನ್​ ಇರುವ ಜೈಲು ಕೊಠಡಿ ಹೇಗಿದೆ? ಟಿವಿ ಇದೆಯೇ? ಖೈದಿಯೇ ಹೇಳಿದ ವಿವರ ಕೇಳಿ..

| Updated By: ಮದನ್​ ಕುಮಾರ್​

Updated on: Jul 24, 2024 | 10:08 PM

ಪರಪ್ಪನ ಅಗ್ರಹಾರದಲ್ಲಿ ದರ್ಶನ್​ ಅವರನ್ನು ಪ್ರತ್ಯೇಕವಾಗಿ ಒಂದು ಕೊಠಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಜೈಲು ಶಿಕ್ಷೆ ಮುಗಿಸಿ ಬಂದ ತುರುವನೂರು ಸಿದ್ದಾರೂಢ ಅವರು ವಿವರಿಸಿದ್ದಾರೆ. ‘ದರ್ಶನ್ ಅವರು ತುಂಬಾ ಕುಗ್ಗಿದ್ದಾರೆ. ವಿಐಪಿ ಟ್ರೀಟ್​ಮೆಂಟ್​ ಇಲ್ಲ. ಅದು ಹೆಸರಿಗಷ್ಟೇ ವಿಐಪಿ ಸೆಲ್​’ ಎಂದಿದ್ದಾರೆ ಸಿದ್ದಾರೂಢ.

ಹೊರಗಡೆ ಇದ್ದಾಗ ನಟ ದರ್ಶನ್​ ಅವರು ಐಷಾರಾಮಿ ಜೀವನ ನಡೆಸುತ್ತಿದ್ದರು. ಆದರೆ ಜೈಲಿನಲ್ಲಿ ಅವರ ಪರಿಸ್ಥಿತಿ ಕಷ್ಟವಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿದ್ದಾರೆ. ಅವರನ್ನು ವಿಐಪಿ ಕೊಠಡಿಯಲ್ಲಿ ಇರಿಸಲಾಗಿದೆ. ಆ ಕೊಠಡಿ ಯಾವ ರೀತಿ ಇರುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಆ ಬಗ್ಗೆ ಈಗಾಗಲೇ ಜೈಲು ಶಿಕ್ಷೆ ಮುಗಿಸಿಬಂದಿರುವ ತುರುವನೂರು ಸಿದ್ದಾರೂಢ ಅವರು ಮಾತನಾಡಿದ್ದಾರೆ. ‘8-12 ಅಡಿ ಉದ್ದದ ಕೊಠಡಿ ಕೊಟ್ಟಿದ್ದಾರೆ. ಅದರಲ್ಲಿ ಟಿವಿ ಇದೆ. ಅದು ದರ್ಶನ್ ಅವರಿಗಾಗಿ ಸ್ಪೆಷಲ್​ ಆಗಿ ನೀಡಿದ್ದಲ್ಲ. ಅಲ್ಲಿನ ಎಲ್ಲರಿಗೂ ಇರುತ್ತದೆ. 20 ಲೀಟರ್​ ಕ್ಯಾನ್​ ಹಾಗೂ ಒಂದು ಕುರ್ಚಿ ಇದೆ. ನೆಲದ ಮೇಲೆಯೇ ಮಲಗಬೇಕು. ಜೈಲಿನ ಊಟವನ್ನೇ ನೀಡುತ್ತಿದ್ದಾರೆ. ಮನೆ ಊಟ ನೀಡಿಲ್ಲ. ಕೆಲವು ಪುಸ್ತಕಗಳನ್ನು ದರ್ಶನ್​ ಓದುತ್ತಿದ್ದಾರೆ’ ಎಂದು ತುರುವನೂರು ಸಿದ್ದಾರೂಢಾ ಹೇಳಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.