‘ನಮ್ಮನೆ ದೇವ್ರು ಆಂಜನೇಯ..’: ಜಮೀರ್​ ಎದುರು ಡೈಲಾಗ್​ ಹೊಡೆದ ಸಾಧು ಕೋಕಿಲ, ದರ್ಶನ್​

Updated on: Feb 04, 2024 | 10:39 AM

ನಟ ದರ್ಶನ್​ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಅವರು ಎಲ್ಲಿಯೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ವೇದಿಕೆ ಏರಿದರೆ ಡೈಲಾಗ್​ ಹೊಡೆಯುವಂತೆ ಫ್ಯಾನ್ಸ್​ ಒತ್ತಾಯಿಸುತ್ತಾರೆ. ಹಂಪಿ ಉತ್ಸವದಲ್ಲೂ ಅವರು ಡೈಲಾಗ್​ ಹೇಳಿದ್ದಾರೆ. ‘ಮಚ್ಚು ಎರಡು ದಪ ಕೆಂಪಾಗುತ್ತೆ..’ ಎಂದು ಅವರು ‘ಕಾಟೇರ’ ಸಿನಿಮಾದ ಮಾಸ್​ ಡೈಲಾಗ್​ ಹೊಡೆದು ಮನರಂಜನೆ ನೀಡಿದ್ದಾರೆ.

ಅದ್ದೂರಿಯಾಗಿ ನಡೆಯುತ್ತಿರುವ ಹಂಪಿ ಉತ್ಸವದಲ್ಲಿ (Hampi Utsava) ಎರಡನೇ ದಿನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​, ನಟ, ನಿರ್ದೇಶಕ, ಸಂಗೀತ ಸಂಯೋಜಕ ಸಾಧು ಕೋಕಿಲ (Sadhu Kokila) ಅವರು ವೇದಿಕೆ ಹಂಚಿಕೊಂಡಿದ್ದಾರೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್​ ಅಹ್ಮದ್​ ಖಾನ್​ ಅವರು ಕೂಡ ಭಾಗಿ ಆಗಿದ್ದಾರೆ. ಈ ವೇಳೆ ವೇದಿಕೆಯಲ್ಲಿ ಸಾಧು ಕೋಕಿಲ ಮತ್ತು ದರ್ಶನ್​ (Darshan) ಅವರು ಡೈಲಾಗ್​ ಹೊಡೆದರು. ‘ನಮ್​ ಮನೆ ದೇವ್ರು ಆಂಜನೇಯ. ಎತ್ತಿದ್ರೆ ಗದೆ, ಇಳಿಸಿದ್ರೆ ವದೆ’ ಎಂದು ಅವರು ಡೈಲಾಗ್​ ಹೇಳಿದರು. ಜಮೀರ್​ ಅವರ ಕೋರಿಕೆ ಮೇಲೆ ದರ್ಶನ್​ ಅವರು ‘ಕಾಟೇರ’ ಸಿನಿಮಾದ ಡೈಲಾಗ್​ ಕೂಡ ಹೊಡೆದರು. ‘ನಮ್ಮ ಅಣ್ಣ (ಜಮೀರ್​) ಯಾವತ್ತೂ ಏನೂ ಕೇಳಿಲ್ಲ. ಆದರೂ ಅವರಿಗೋಸ್ಕರ​ ಒಂದೇ ಒಂದು ಡೈಲಾಗ್​. ನನಗೆ ಡೈಲಾಗ್​ ಹೇಳೋಕೆ ಬರಲ್ಲ. ಅದು ತುಂಬ ಕಷ್ಟ. ಯಾಕೆಂದರೆ ಈಗತಾನೆ ಕಲಿಯುತ್ತಿದ್ದೇವೆ’ ಎಂದು ತಮಾಷೆ ಮಾಡಿದರು ದರ್ಶನ್​. ಆ ಬಳಿಕ ಅವರು ಹೇಳಿದ ‘ಕಾಟೇರ’ ಸಿನಿಮಾದ ಡೈಲಾಗ್​ ಕೇಳಿ ಅಭಿಮಾನಿಗಳು ಎಂಜಾಯ್​ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More