‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ

‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ

ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಮದನ್​ ಕುಮಾರ್​

Updated on: Sep 24, 2024 | 3:56 PM

‘ದೇಶದಲ್ಲಿ ಇರುವ ಪ್ರತಿಯೊಬ್ಬ ಆರೋಪಿ ಮತ್ತು ಅಪರಾಧಿಗೆ ಕೆಲವು ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಹಾಸಿಗೆ, ದಿಂಬು, ಕನ್ನಡಿ, ಆರ್​ಓ ನೀರು ಮುಂತಾದ್ದನ್ನು ಪಡೆಯುವುದು ಆರೋಪಿಯ ಮೂಲಭೂತ ಹಕ್ಕು. ಅದನ್ನು ಯಾರೂ ತಿರಸ್ಕರಿಸುವಂತಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ. ಈ ಕುರಿತು ಜೈಲರ್​ಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್​ ಪರ ವಕೀಲರು ಮಾಧ್ಯಮಗಳ ಎದುರು ಗರಂ ಆಗಿದ್ದಾರೆ. ದರ್ಶನ್​ ಭೇಟಿ ಬಳಿಕ ಮಾತನಾಡಿದ ಅವರು, ‘ದರ್ಶನ್​ ಅವರಿಗೆ ಬೆನ್ನು ನೋವು ಇದೆ. ಜೈಲರ್​ಗೆ ಮನವಿ ಮಾಡಿದ್ದೇವೆ. ಜೈಲಿನ ಮ್ಯಾನುವಲ್​ ಪ್ರಕಾರ ಕೊಡಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಕೊಡಿ ಅಂತ ಹೇಳಿದ್ದೇವೆ. ದರ್ಶನ್​ ಮಾತ್ರವಲ್ಲದೇ ಬೇರೆ ಖೈದಿಗಳಿಗೂ ಏನೆಲ್ಲ ಕೊಡಬೇಕು ಎಂಬುದನ್ನು ಜೈಲರ್​ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ದರ್ಶನ್​ ಪರ ವಕೀಲರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.