ಕೈ ನೋವಿನ ನಡುವೆಯೂ ಸ್ಟಾರ್​ ಚಂದ್ರು ಪರ ನಟ ದರ್ಶನ್​ ಭರ್ಜರಿ ಪ್ರಚಾರ

|

Updated on: Apr 22, 2024 | 8:27 PM

ನಟ ದರ್ಶನ್​ ಅವರಿಗೆ ಇರುವ ಫ್ಯಾನ್​ ಫಾಲೋಯಿಂಗ್​ ಬಹಳ ದೊಡ್ಡದು. ಅವರು ಈಗ ಸ್ಟಾರ್​ ಚಂದ್ರು ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಹಲವು ಊರುಗಳಿಗೆ ತೆರಳಿ ಅವರು ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರನ್ನು ಹತ್ತಿರದಿಂದ ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ (Darshan) ಅವರು ಸಿನಿಮಾ ಕೆಲಸಗಳಿಗೆ ಸಣ್ಣ ಬಿಡುವು ನೀಡಿದ್ದಾರೆ. ಅದಕ್ಕೆ ಮುಖ್ಯ ಕಾರಣ ಕೈ ನೋವು. ಕೆಲವೇ ದಿನಗಳ ಹಿಂದೆ ಅವರಿಗೆ ಚಿಕ್ಕ ಸರ್ಜರಿ ಆಗಿದೆ. ಹಾಗಾಗಿ ಅವರು ತಕ್ಷಣಕ್ಕೆ ಶೂಟಿಂಗ್​ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಹಾಗಾಗಿ ಒಂದಷ್ಟು ದಿನಗಳ ಬ್ರೇಕ್​ ಪಡೆದುಕೊಂಡಿದ್ದಾರೆ. ಅದರ ನಡುವೆಯೇ ದರ್ಶನ್​ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಮಂಡ್ಯ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಪರವಾಗಿ ದರ್ಶನ್ ಅವರು ಪ್ರಚಾರ ಮಾಡುತ್ತಿದ್ದಾರೆ. ಹಲವು ಊರುಗಳಿಗೆ ತೆರಳಿ ಮತ ಕೇಳುತ್ತಿದ್ದಾರೆ. ದರ್ಶನ್​ ಹೋದಲ್ಲೆಲ್ಲ ಜನರು ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ನೆಚ್ಚಿನ ನಟನ ಮಾತುಗಳನ್ನು ಕೇಳಲು ಮಂಡ್ಯ (Mandya) ಜನತೆ ಮುಗಿಬೀಳುತ್ತಿದ್ದಾರೆ. ಇಂದು (ಏಪ್ರಿಲ್​ 22) ಕೂಡ ದರ್ಶನ್​ ಅವರು ಸಕ್ರಿಯವಾಗಿ ಕ್ಯಾಂಪೇನ್​ನಲ್ಲಿ ಪಾಲ್ಗೊಂಡಿದ್ದಾರೆ. ‘ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಟಾರ್​ ಚಂದ್ರು ಅವರು ನಿಂತಿದ್ದಾರೆ. ತಮ್ಮ ಅಮೂಲ್ಯವಾದ ಮತವನ್ನು ಅವರಿಗೆ ಹಾಕಿ. ನಿಮ್ಮ ಸೇವೆಯನ್ನು ಮಾಡುವ ಅವಕಾಶ ಮಾಡಿಕೊಡಬೇಕು ಎಂದು ನಿಮ್ಮೆಲ್ಲರಲ್ಲಿ ತಲೆ ಬಾಗಿ ಬೇಡಿಕೊಳ್ಳುತ್ತೇನೆ. ಧನ್ಯವಾದಗಳು’ ಎಂದಿದ್ದಾರೆ ದರ್ಶನ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.