ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ

|

Updated on: Dec 21, 2024 | 2:45 PM

Darshan Thoogudeepa: ನಟ ದರ್ಶನ್ ತೂಗುದೀಪ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು ಇದೀಗ ಮೈಸೂರಿನ ಫಾರಂ ಹೌಸ್​ಗೆ ವಾಸ್ತವ್ಯ ಬದಲಾಯಿಸಿಕೊಂಡಿದ್ದಾರೆ. ಮೈಸೂರಿನ ಫಾರಂ ಹೌಸ್​ನಲ್ಲಿ ವಾಕಿಂಗ್ ಇನ್ನಿತರೆಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಮೈಸೂರಿನ ಫಾರಂ ಹೌಸ್​ನ ವಿಡಿಯೋ ಇಲ್ಲಿದೆ ನೋಡಿ.

ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಜಾಮೀನು ಪಡೆದುಕೊಂಡು ಇದೀಗ ತಮ್ಮ ಮೈಸೂರಿನ ಫಾರಂ ಹೌಸ್​ ಸೇರಿಕೊಂಡಿದ್ದಾರೆ. ನಿನ್ನೆ ತಾಯಿ ಮೀನಮ್ಮ ಅವರನ್ನು ಫಾರಂ ಹೌಸ್​ನಲ್ಲಿ ಭೇಟಿಯಾದ ನಟ ದರ್ಶನ್. ಇಂದು (ಡಿಸೆಂಬರ್ 21) ಬೆಳಿಗ್ಗೆ ವಾಕಿಂಗ್ ಮಾಡಿದರು. ನಿನ್ನೆ ಆರಾಮವಾಗಿ ವಾಕ್ ಮಾಡುತ್ತಿದ್ದ ದರ್ಶನ್, ಇಂದು ಬೆಳಿಗ್ಗೆ ಕುಂಟುತ್ತಾ ವಾಕಿಂಗ್ ಮಾಡುತ್ತಿದ್ದರು. ತಮ್ಮ ವಾಕಿಂಗ್ ವಿಡಿಯೋ ಹೊರಬರುತ್ತಿದ್ದಂತೆ. ದರ್ಶನ್ ತಮ್ಮ ಫಾರಂ ಹೌಸ್​ನ ಗೇಟಿಗೆ ಟಾರ್ಪಲ್ ಹಾಕಿ ಹೊರಗಿನಿಂದ ಯಾರೂ ನೋಡದಿರುವಂತೆ ಮಾಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ..

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 21, 2024 02:43 PM