ಕಟ್ಟುನಿಟ್ಟಿನ ಮನುಷ್ಯ ದರ್ಶನ್ ದುಡ್ಡಿನ ವಿಷಯದಲ್ಲಿ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು, ನಿರ್ಮಾಪಕ

|

Updated on: Jul 03, 2024 | 1:31 PM

ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು, ತನಗೆ ಇಷ್ಟು ಸಂಭಾವನೆ ಬೇಕು ಅಂತ ಹೇಳುತ್ತಿದ್ದರು, ಕೊಡಲು ಸಾಧ್ಯವಾಗುವ ಹಾಗಿದ್ದರೆ ಮುಂದುವರಿಯೋಣ, ಇಲ್ಲದಿದ್ದರೂ ವಿಶ್ವಾಸ ಮುಂದುವರಿಸಿಕೊಂಡು ಹೋಗೋಣ ಅನ್ನುತ್ತಿದ್ದರು ಎಂದು ಕೆ ಮಂಜು ಹೇಳುತ್ತಾರೆ. ಅವರ ನಿರ್ಮಾಣದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ದರ್ಶನ್ ನಟಿಸಿದ್ದರು.

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ನಿರ್ಮಾಪಕ ಕೆ ಮಂಜು ದೊಡ್ಡ ಹೆಸರು ಮತ್ತು ಹಲವಾರು ಅದ್ದೂರಿ ಮತ್ತು ಯಶಸ್ವೀ ಚಿತ್ರಗಳನ್ನು ಅವರು ಕನ್ನಡಿಗರಿಗೆ ನೀಡಿದ್ದಾರೆ. ತಮ್ಮ ಕಚೇರಿಯಲ್ಲಿಂದು ಟಿವಿ9 ಸಿನಿಮಾ ವರದಿಗಾರನೊಂದಿಗೆ ಮಾತಾಡಿದ ಅವರು, ಕನ್ನಡ ಚಿತ್ರೋದ್ಯಮ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಈಗ ಸಂಕಷ್ಟದಲ್ಲಿದೆ ಎಂದು ಹೇಳಿದರು. ಡಿಜಿಟಲ್, ಸ್ಯಾಟೆಲೈಟ್ ಮತ್ತು ಒಟಿಟಿಗಳ ಹಾವಳಿಯಿಂದಾಗಿ ಥೇಟರ್ ಗಳ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ, ಜನ ಮಲ್ಟಿಪ್ಲೆಕ್ಸ್ ಗಳ ಮುಖ ಮಾಡುತ್ತಿದ್ದಾರೆ, ಕೇವಲ ಸ್ಟಾರ್​ಗಳ ಸಿನಿಮಾ ಮಾತ್ರ ಓಡುತ್ತವೆ, ಚಿತ್ರ ನಿರ್ಮಾಣ ಬಹಳ ತೊಂದರೆಯಾಗುತ್ತಿದೆ ಎಂದು ಮಂಜು ಹೇಳಿದರು. ಚಿತ್ರರಂಗದಲ್ಲಿ ನಿರ್ಮಾಪಕರು ಉಳಿಯಬೇಕಾದರೆ ಒಂದು ಬದಲಾವಣೆ ಬರಬೇಕಿದೆ, ಅದು ಯಾವಾಗ ಮತ್ತು ಎಲ್ಲಿಂದ ಬರುತ್ತೋ ಎಂದು ಅವರು ಹೇಳುತ್ತಾರೆ. ಈಗ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿರುವ ದರ್ಶನ್ ಗೆ ಬ್ರೇಕ್ ನೀಡಿದ ಮತ್ತು ಅವರನ್ನು ಸ್ಟಾರ್ ಆಗಿ ಬೆಳೆಸಿದ ಹಲವು ಚಿತ್ರ ನಿರ್ಮಾಪಕರಲ್ಲಿ ಮಂಜು ಕೂಡ ಒಬ್ಬರು. ಸೆಟ್ ಗಳಲ್ಲಿ ದರ್ಶನ್ ನೀಟ್, ಕ್ಲೀನ್ ಮತ್ತು ಕಟ್ಟುನಿಟ್ಟಾಗಿರುತ್ತಿದ್ದರು, ಮತ್ತು ತಾನಾಡಿದ ಮಾತಿಗೆ ಬದ್ಧರಾಗಿರುತ್ತಿದ್ದರು ಎಂದು ಮಂಜು ಹೇಳುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜೈಲಿನಲ್ಲಿರೋ ದರ್ಶನ್​ಗೆ ಒಂದು ನ್ಯಾಯ ಇತರ ಬಂಧಿಗಳಿಗೊಂದು ನ್ಯಾಯ?